LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಯೋಗ ಭಾರತವು ಮಾನವಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆ: ಮನೋಹರ ಬಿರಾದಾರ

Advertisement

ಔರಾದ್: ಭಾರತವು ಮಾನವಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಯಾದ ಯೋಗವು, ಸಮಗ್ರ ಆರೋಗ್ಯ, ಯೋಗಕ್ಷೇಮಕ್ಕಾಗಿ ಗಡಿಗಳನ್ನು ಮೀರಿ ಜಾಗತಿಕ ಸಂಸ್ಕ್ರತಿಯಾಗಿ ಬೆಳೆದಿದೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆಯ ಆಳವಾದ ಜ್ಞಾನವನ್ನು ಪ್ರತಿಬಿಂಬಿಸುವುದರೊಂದಿಗೆ, ಆರೋಗ್ಯಕರ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಯೋಗವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕಿದೆ ಎಂದುಹೇಳಿದರು.

news_1782117364_2_684.webp

 

ತಾಲೂಕಿನ ಸಂತಪೂರನ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ ಜರುಗಿದ 12 ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು ಜೂನ್ 21 ವಿಶ್ವದಾದ್ಯಂತ ಯೋಗ ಆಚರಿಸುವ ದಿನವಾಗಿದೆ, ಯೋಗದಿಂದಾಗಿ ಭಾರತ ವಿಶ್ವದಲ್ಲಿ ಗೌರವಯುತ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಯಾವುದೇ ವಯೋಮಾನದವರಿಗೆ ಸೀಮಿತವಾಗಿಲ್ಲ; ಇದು ಮಾನವ ಚೈತನ್ಯದ ಅಭಿವ್ಯಕ್ತಿಯಾಗಿದೆ" ಎಂದು ಹೇಳಿದರು. ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ", ಇದು ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ, ಭಾವನಾತ್ಮಕ ಸ್ಥಿತಿಸ್ಥಾಪಕತ್ವ ಮತ್ತು ಸಕ್ರಿಯ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ, ಇದು ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡುತ್ತದೆ. ಎಂದು ಹೇಳಿದರು. 

news_1782117364_1_245.webp

 

ಯೋಗ ಗುರು ರಾಜಕುಮಾರ್ ನಾಯಕ್ ಮಾತನಾಡಿ ಯೋಗವು ಜಗತ್ತಿಗೆ ಭಾರತ ನೀಡಿದ ತನ್ನ ಸಾಂಸ್ಕೃತಿಕ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ಜಾಗತಿಕ ಸಮುದಾಯವನ್ನು ಶಾಂತಿ ಮತ್ತು ಸಾಮರಸ್ಯದತ್ತ ಕೊಂಡೊಯ್ಯುವಲ್ಲಿ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ’ ಇಂದಿನ ಆಧುನಿಕ ಕಾಲದಲ್ಲಿ ನಾವೆಲ್ಲ ಒತ್ತಡದಲ್ಲಿದ್ದೇವೆ. ಈ ಒತ್ತಡ ನಿರ್ವಹಣೆಗೆ ಯೋಗವೇ ಮದ್ದು. ಒತ್ತಡ ನಿವಾರಣೆಗೆ ನಾವೆಲ್ಲ ಪ್ರತಿ ದಿನ ಯೋಗ ಮಾಡೋಣ. ನಮ್ಮ ಬದುಕು ಉತ್ತಮವಾಗಲು, ಉತ್ತಮ ಬದುಕು ಕಾಣಲು ಪ್ರತಿ ದಿನ ಯೋಗಾಭ್ಯಾಸ ಮಾಡಲೇಬೇಕು’ ಎಂದು ತಿಳಿಸಿದರು.

news_1782117364_3_539.webp

 

ಕಾಯ೯ಕ್ರಮದಲ್ಲಿ ಶಾಲೆಯ ಕಾಯ೯ದಶಿ೯ ನಂದಾದೀಪ ಬೋರಳೆ, ಮುಖ್ಯ ಅತಿಥಿಯಾಗಿ ವಿಠ್ಠಲ್ ಚಟ್ನಾಳಕರ್, ಸಂಗೀತಾ ಹೊಸಖಂಡೆ, ರಾಜಶೇಖರ್ ಕುಶನೂರೆ, ಶಶಿಕಲಾ ಜಾಜ್೯, ಲಕ್ಷ್ಮೀ ಕಕ೯ಲೇ, ಈಶ್ವರ್ ಪವಾರ್ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST