LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗೋಣಿತುಮಕೂರು ಪಿಎಸಿಎಸ್ ಗೆ 1.12 ಲಕ್ಷ ರೂ ನಿವ್ವಳ ಲಾಭ /  ನವೀಕೃತ ಗೋದಾಮು ಕಟ್ಟಡ ಉದ್ಘಾಟನೆ

Advertisement

ತುರುವೇಕೆರೆ : ರೈತರಿಲ್ಲದೆ ಸಹಕಾರಿ ಸಂಘವಿಲ್ಲ, ರೈತರೇ ಸಹಕಾರಿ ಸಂಘದ ಜೀವಾಳ. ಸಹಕಾರ ಸಂಘಗಳಿಗೆ ಸರ್ಕಾರದ ಯಾವುದೇ ಅನುದಾನ ಬರುವುದಿಲ್ಲ. ಆದ್ದರಿಂದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಡೆಸುವ ವ್ಯವಹಾರವನ್ನು ನಮ್ಮ ಸಹಕಾರಿ ಬ್ಯಾಂಕ್ ಆದ ಡಿಸಿಸಿ ಬ್ಯಾಂಕಿನಲ್ಲಿ ನಡೆಸಬೇಕು, ಆ ಮೂಲಕ ಮತ್ತಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದು ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ ತಿಳಿಸಿದರು.

news_1789981615_0_151.webp

 

ತಾಲ್ಲೂಕಿನ ಗೋಣಿತುಮಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಗೋದಾಮು ಕಟ್ಟಡ ಉದ್ಘಾಟನೆ ಹಾಗೂ 2015-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗೋಣಿತುಮಕೂರು ಸಹಕಾರ ಸಂಘ ತಾಲ್ಲೂಕಿಗೆ ಮಾದರಿ ಸಂಘವಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೆ ಸಂಶಯವಿಲ್ಲ. ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸಂಘದ 952 ಜನರಿಗೆ 3 ಕೋಟಿ 70 ಲಕ್ಷ ರೂ ಸಾಲ ಸೌಲಭ್ಯವನ್ನು ಒದಗಿಸಿದ್ದೇವೆ. ರೈತರು ಸಂಘದಲ್ಲಿಡುವ ಠೇವಣಿ ಹಣದಿಂದ ರೈತರಿಗೆ ಸಾಲ ನೀಡಲಾಗುತ್ತದೆಯೇ ಹೊರತು ಸರ್ಕಾರದ ಹಣದಿಂದಲ್ಲ. ಸಾಲ ಪಡೆದ ರೈತರು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ. ಪ್ರಮುಖವಾಗಿ ಪ್ರಸ್ತುತ ಬರುವ ಕಾಯಿಲೆಗಳು ದೊಡ್ಡದಿದ್ದು ಲಕ್ಷಾಂತರ ರೂ ಹಣ ಆರೋಗ್ಯ ಕಾಪಾಡಿಕೊಳ್ಳಲು ವ್ಯಯಿಸಬೇಕಿದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅಗತ್ಯ ಚಿಕಿತ್ಸಗೆ ನೆರವಾಗಲು ಯಶಸ್ವಿನಿ ವಿಮಾ ಕಾರ್ಡ್ ಅಗತ್ಯವಾಗಿದೆ. ಸಂಘದಿಂದ ಯಶಸ್ವಿನಿ ವಿಮೆ ಮಾಡಿಸುತ್ತಿದ್ದು, ಮಾರ್ಚ್ 31 ಅಂತಿಮ ದಿನವಾಗಿದೆ. ರೈತರು ಕಡ್ಡಾಯವಾಗಿ ಯಶಸ್ವಿನಿ ವಿಮೆ ಮಾಡಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಯಾವುದೇ ರಾಜಕೀಯ ಬೆರೆಸದೆ ಸಹಕಾರ ಸಂಘಗಳು ಕಾರ್ಯನಿರ್ವಹಿಸಬೇಕಿದೆ. ಆಗ ಮಾತ್ರ ಸಂಘದ ಹಾಗೂ ರೈತರ ಅಭಿವೃದ್ದಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಾಜಿ ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣನವರನ್ನು ಸ್ಮರಿಸಬೇಕಿದೆ. ಸಹಕಾರಿ ಸಂಘಗಳಿಗೆ ಕೋಟ್ಯಾಂತರ ರೂ ಸಾಲ ಒದಗಿಸಿ ಸಂಘದ, ರೈತರ ಅಭಿವೃದ್ದಿಗೆ ಶ್ರಮಿಸಿದ್ದಾರೆ. ತಾಲೂಕಿನಲ್ಲಿ ಮಳೆಯಿಲ್ಲದೆ ಭೀಕರ ಬರಗಾಲ ತಾಂಡವವಾಡುತ್ತಿದೆ. ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಮಳೆಯಿಲ್ಲದೆ ರಾಗಿ ಬೆಳೆ ಒಣಗಿ ಹೋಗಿದೆ. ಸರ್ಕಾರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಬರಗಾಲದ ಹಿನ್ನೆಲೆ ರೈತರ ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು. 

ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ ಮಾತನಾಡಿ, ಸಹಕಾರ ಸಂಘದ ಅಧಿಕಾರ ಲಾಭದಾಯಕ ಹುದ್ದೆಯಲ್ಲ, ಸೇವೆ ಅವಕಾಶ ಇರುವ ಸ್ಥಳವಾಗಿದೆ. ರೈತರಿಗೆ ಪ್ರಾಮಾಣಿಕವಾಗಿ ಸರ್ಕಾರದ ಸವಲತ್ತುಗಳನ್ನು ಒದಗಿಸುವ ಕೆಲಸವನ್ನು ಸಂಘದ ಪದಾಧಿಕಾರಿಗಳು ಮಾಡಬೇಕಿದೆ. ಸಂಘದ, ರೈತರ ಅಭಿವೃದ್ದಿಗೆ ಕಂಕಣಬದ್ಧವಾಗಿ ದುಡಿಯುತ್ತೇನೆ ಎಂಬುವವರು ಮಾತ್ರ ಸಹಕಾರ ಸಂಘಕ್ಕೆ ಬರಬೇಕು. ಗೋಣಿತುಮಕೂರು ಸಂಘದಲ್ಲಿನ ಅಧ್ಯಕ್ಷ, ನಿರ್ದೇಶಕರ ಹೋರಾಟದ ಫಲವಾಗಿ ಈ ಗೋದಾಮು ನವೀಕರಣಗೊಂಡು ಉಪಯೋಗಕ್ಕೆ ಲಭ್ಯವಾಗಿದೆ. ಈ ರೀತಿಯ ಸೇವಾ ಹೋರಾಟ ಮನೋಭಾವ ಇದ್ದಾಗ ಸಂಘದ ಅಭಿವೃದ್ದಿ ಸಾಧ್ಯವಾಗಲಿದೆ ಎಂದರು. 

ಸಂಘದ ಅಧ್ಯಕ್ಷ ಆರ್. ಹರ್ಷಿತ್ ಗೌಡ ಮಾತನಾಡಿ, 2025-26 ನೇ ಸಾಲಿನಲ್ಲಿ ಸಂಘವು 1 ಲಕ್ಷದ 12 ಸಾವಿರ ರೂ ಲಾಭಗಳಿಸಿರುವುದು ಬಹಳ ಹರ್ಷ ತಂದಿದೆ. ಇಕ್ಕದೆ ನಮ್ಮ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ಹಾಗೂ ರೈತರ ಸಹಕಾರ ಪ್ರಮುಖ ಕಾರಣವಾಗಿದೆ. ಈ ಸಾಲಿನಲ್ಲಿ 1,65,400 ರೂ ಸದಸ್ಯರ ಷೇರುಧನವಿದ್ದು, ಜಿಲ್ಲಾ ಬ್ಯಾಂಕಿನಿಂದ ಸದಸ್ಯರಿಗೆ ಕೆ.ಸಿ.ಸಿ. ಸಾಲವಾಗಿ 3 ಕೋಟಿ 38ಲಕ್ಷದ 22ಸಾವಿರ ರೂ ದೊರಕಿಸಿಕೊಡಲಾಗಿದೆ. ಸಂಘದಿಂದ ವ್ಯಾಪಾರಿ ಸಾಲವಾಗಿ 8 ಲಕ್ಷದ 88ಸಾವಿರದ 120 ರೂ ನೀಡಲಾಗಿದೆ. ಗೋದಾಮು ಕಟ್ಟದ ನವೀಕರಣಕ್ಕೆ ಸಾಕಷ್ಟು ಮಂದಿ ದಾನಿಗಳು ಧನಸಹಾಯದ ಮೂಲಕ ಸಹಕಾರ ನೀಡಿದ್ದು, ಅವರೆಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಸಾಲಾ ಜಯರಾಮ್ ಅವರನ್ನು ಗೌರವಿಸಲಾಯಿತು. ಗೋದಾಮು ಕಟ್ಟಡ ನವೀಕರಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಗ್ರಾಮದ ಹಿರಿಯ ರಾಮೇಗೌಡರು, ಹುಲಿಕಲ್ ಲೋಕೇಶ್, ಗೋಣಿತುಮಕೂರು ಪುಟ್ಟರಂಗಪ್ಪ, ಸಂಘದ ಉಪಾಧ್ಯಕ್ಷೆ ಪೂಜಾಮಹೇಶ್, ನಿರ್ದೇಶಕರಾದ ಜಿ.ಆರ್.ಶಿವಣ್ಣ, ಜಿ.ಕೆ.ನಂಜುಂಡೇಗೌಡ, ರಂಗಯ್ಯ, ಜಿ.ಕೆ.ನವೀನ್ ಕುಮಾರ್, ಬಿ.ಎಸ್.ತ್ಯಾಗರಾಜು, ಡಿ.ಜೆ.ಬಸವರಾಜು, ಜಿ.ಜಿ.ನಾಗರಾಜು, ಜಯಲಕ್ಷ್ಮೀರಾಜಣ್ಣ, ಮಂಜುನಾಥಾಚಾರ್, ಡಿಸಿಸಿಬಿ ಮೇಲ್ವಿಚಾರಕ ಹರೀಶ್, ವೃತ್ತಿಪರ ನಿರ್ದೇಶಕರಾದ ಎನ್.ಸಿ.ಚನ್ನಕೇಶವ, ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ.ಪ್ರಕಾಶ್ ಸೇರಿದಂತೆ ರೈತರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್