LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಕ್ರಮ ಮರಂ ದಂಧೆಗೆ ಕಡಿವಾಣ ಯಾವಾಗ ?

Advertisement

ಸಿಂಧನೂರು :  ಸಿಂಧನೂರು ನಗರದ ಪುನರ್ವಸತಿ ಕ್ಯಾಂಪ್ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬರ್ 322,ಹಾಗೂ 321,  239 ಕ್ಷೇತ್ರ 20 ಎಕರೆ ಪಟ್ಟ ಜಮೀನಿನಲ್ಲಿ ರಾಜಾರೋಷವಾಗಿ ಮರಮ್ ಅನ್ನು ಯಾವುದೇ ಇಲಾಖೆಯಿಂದ ಪರವನಿಗೆ ಪಡೆಯದೆ   ಅಕ್ರಮ ಸಾಗಾಣಿಕೆ ದಂದೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ  ಸೇನೆಯ ರಾಜ್ಯ ಕಾರ್ಯಧ್ಯಕ್ಷ ಉಮೇಶಗೌಡ ಹರಳಹಳ್ಳಿ ತೀವ್ರವಾಗಿ ಖಂಡಿಸಿ ಮಾತನಾಡಿದ ಅವರು ರಾಜಾರೋಷವಾಗಿ ನಗರದಲ್ಲಿ ಮಾರಂ ದಂದೆ ನಡೆಯುತ್ತಿದ್ದರು ಕಂದಾಯ ಇಲಾಖೆ ಲೋಕೋಪಯೋಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ಇದ್ದರೂ   ಯಾವುದೇ ಕ್ರಮಕ್ಕೆ ಮುಂದಾಗದೆ ಕೇವಲ ಆಫೀಸಿಗೆ ಬಂದು ಹೋಗುವುದು ಅವರ ಕೆಲಸ ಅಷ್ಟೇ ಆಗಿದೆ ಆದರೆ ದಿನವಿಡೀ ತಾಲೂಕಿನಲ್ಲಿ ಅಕ್ರಮ ಮಾರಮ್ ದಂದೆ ನಡೆಯುತ್ತಲೇ ಇದೆ  ಆದರೆ ಇದನ್ನು ತಡೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಫಲರಾಗಿರುವುದಂತೂ ಮೇಲ್ನೋಟಕ್ಕೆ  ಕಂಡುಬರುತ್ತದೆ
 

ದಿನನಿತ್ಯ ಮರುಮ್ ತುಂಬಿದ ಲಾರಿ ಟ್ರಾಕ್ಟರ್ ಓಡಾಟದಿಂದ ದಾರಿ ಹೋಕರು ಮತ್ತು ರಸ್ತೆ ಪಕ್ಕದ ಮನೆಯವರು ಧೂಳಿನಿಂದ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ 
 ತಹಸಿಲ್ದಾರ್ ಅರುಣ್ ಕುಮಾರ ದೇಸಾಯಿ ಸಿಂಧನೂರು ನಲ್ಲಿ ಕಾರ್ಯ ನಿರ್ವಹಿಸಲು ಈಗಾಗಲೇ ನಾಲ್ಕು ಐದು ವರ್ಷಗಳು ಕಳೆದು ಹೋಗಿದ್ದು ಸಾರ್ವಜನಿಕರ ಕುಂದು ಕೊರತೆಗಳು ಪರಿಹರಿಸುವಲ್ಲಿ ಅವರು ವಿಫಲರಾಗಿದ್ದಾರೆ ಬೇರೆ ಕಡೆ ವರ್ಗಾವಣೆ ಆಗದೆ ರಾಜಕೀಯ ಪ್ರಭಾವದಿಂದ ಇಲ್ಲೇ ಉಳಿದುಕೊಂಡಿದ್ದಾರೆ  ಕಚೇರಿ ಅವಧಿ ಮುಗಿದ ನಂತರ ಕಚೇರಿಗೆ ಬಂದು ತಮ್ಮ ಕೆಲಸ ಮಾಡಿಕೊಂಡು ಹೋಗುವುದು ಹೆಚ್ಚಾಗಿದ್ದು ಇದರಿಂದ ಆಡಳಿತವು ಸಂಪೂರ್ಣ ವೈಫಲ್ಯದಿಂದ ಕೂಡಿದೆ ಹೀಗಾಗಿ ತಾಸಿಲ್ದಾರ್ ಮತ್ತು ಭೂ ವಿಜ್ಞಾನ ಗಣಿ ಇಲಾಖೆ, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ವಿರುದ್ಧ ತನಿಖೆ ಮಾಡಿ ಸದರಿ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಗೊಳಿಸುವಂತೆ ತಾಸಿಲ್ ಕಚೇರಿಯ ಮೂಲಕ  ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು  
 

ಈ ಸಂದರ್ಭದಲ್ಲಿ  ಕರವೇ ಕನ್ನಡ ಸೇನೆ ರಾಜ್ಯ ಕಾರ್ಯಧ್ಯಕ್ಷ ಉಮೇಶ್ ಗೌಡ ಹರಳಹಳ್ಳಿ. ಜಿಲ್ಲಾ ಯುವ ಘಟಕ ಅಧ್ಯಕ್ಷ ಪರುಶುರಾಮ್ ಗೀತಾ ಕ್ಯಾಂಪ್. ತಾಲೂಕು ಉಪಾಧ್ಯಕ್ಷ ಗದ್ಯಪ್ಪ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕುನ್ನಟಗಿ. ನಗರ ಘಟಕ ಅಧ್ಯಕ್ಷ ದಾವಲಸಾಬ ದೊಡ್ಡಮನಿ. ಗ್ರಾಮೀಣ ಭಾಗದ ಅಧ್ಯಕ್ಷ ಸಿದ್ದಪ್ಪ ಸುಲ್ತಾನಾಪುರ ಸೇರಿದಂತೆ  ಆದಿಶೇಷ. ವೆಂಕಟೇಶ್ ಸೇರಿದಂತೆ ಅನೇಕರಿದ್ದರು

 

ವರದಿ :ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST