LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಶಕ್ತರಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆಯ ಜನಮಂಗಲ ಕಾರ್ಯಕ್ರಮ ವಸಂತ ಎಸ್

Advertisement

ತೆಕ್ಕಲಕೋಟೆ: ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಅಶಕ್ತರು/ವಿಶೇಷ ಚೇತನರಿಗೆ ಮಂಜೂರುಗೊಂಡ ವಾಟರ್‌ ಬೆಡ್‌ನ್ನು ಫಲಾನುಭವಿ ಹುಸೇನಬೀ ಯವರಿಗೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ವಸಂತ ಎಸ್ ರವರು ವಿತರಿಸಿದರು. ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಅದರಲ್ಲೂ ವಿಶೇಷವಾಗಿ ಅಶಕ್ತರು/ವಿಶೇಷ ಚೇತನರಿಗೆ ಜಲಮಂಗಲ ಕಾರ್ಯಕ್ರಮದಡಿ ವೀಲ್ ಚೇರ್, ಕಮೋಡ್ ಚೇರ್, ಯು ಸೇಫ್ ವಾಕರ್, ತ್ರೀ ಲೆಗ್ ಸ್ಟಿಕ್, ಸಿಂಗಲ್ ಲೆಗ್ ಸ್ಟಿಕ್, ವಾಟರ್ ಬೆಡ್ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು, ತಾಲೂಕಿನಲ್ಲಿ ಈವರೆಗೆ 38.50 ಲಕ್ಷ ಮೌಲ್ಯದ ಸಲಕರಣೆಗಳನ್ನು ವಿತರಿಸಲಾಗಿದ್ದು ವಿಶೇಷ ಚೇತನರು ಗೌರವಯುತ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯತಿ ಸದಸ್ಯ ನಾಸಿರ್ ಹುಸೇನ್, ಹೊಸಪೇಟೆ ಟೈಮ್ಸ್ ಪತ್ರಿಕೆಯ ವರದಿಗಾರ ಖಾಜಾಮೊದ್ದಿನ್, ಸೇವಾ ಪ್ರತಿನಿಧಿ ಪರಿದಾಬಾನು, ಸಿ ಎಸ್ ಸಿ ಸೇವಾದಾರ ಶ್ರೀನಿವಾಸ ಉಪಸ್ಥಿತರಿದ್ದರು.

ವರದಿ.ಶ್ರೀನಿವಾಸ ನಾಯ್ಕ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST