LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಾಸವಿ ಪೆನುಗೊಂಡ ಯಾತ್ರಾರ್ಥಿಗಳಿಗೆ ಗೌರವ ಸಮರ್ಪಿಸಿದ ಆರ್ಯ ವೈಶ್ಯ ಮಂಡಳಿ

Advertisement
ತುರುವೇಕೆರೆ: ತಾಲ್ಲೂಕು ಆರ್ಯವೈಶ್ಯ ಸಮುದಾಯದಿಂದ ವಾಸವಿ ಪೆನುಗೊಂಡ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಬಂದ ಎಲ್ಲರನ್ನೂ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಮಂಡಳಿ, ಶ್ರೀನಿಧಿ ಭಜನಾ ಮಂಡಳಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ನರಸಿಂಹಮೂರ್ತಿ, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿರುವ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ ಆಕರ್ಷಕ ಬಹು-ಬಣ್ಣದ (ಗಾಳಿ ಗೋಪುರ) ಏಳು ಅಂತಸ್ತಿನ ಗೋಪುರವಾಗಿದೆ. ಈ ಪೆನುಗೊಂಡ ಕ್ಷೇತ್ರವನ್ನು 'ವೈಶ್ಯರ ಕಾಶಿ' ಎಂದು ಪರಿಗಣಿಸಲಾಗಿದೆ ಮತ್ತು ಇದು ವೈಶ್ಯರಿಗೆ ಪವಿತ್ರ ಸ್ಥಳವಾಗಿದೆ ಎಂದರು.

ವಾಸವಿ ಮಾತೆಯ ವಿಗ್ರಹವನ್ನು 11 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು, ಆದರೆ ನಿಜವಾದ ದೇವಾಲಯವು 3000 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಇತಿಹಾದ ಪ್ರಸಿದ್ಧ ದೇವಾಲಯ ಹಾಗೂ ದೇವಿ ದರ್ಶನ ಪಡೆದು ಬಂದ ಆರ್ಯ ವೈಶ್ಯ ಬಾಂದವರೇ ಪುಣ್ಯವಂತರು ಎಂದರು.

ಪೆನುಗೊಂಡ ಯಾತ್ರೆಯನ್ನು ಯಶ‌ಸ್ವಿಯಾಗಿ ಪೂರೈಸಿ ಬಂದ ಯಾತ್ರಾರ್ಥಿಗಳನ್ನು ಆರ್ಯ ವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಮಂಡಳಿ, ಶ್ರೀನಿಧಿ ಭಜನಾ ಮಂಡಳಿ ವತಿಯಿಂದ ಗೌರವಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಪದ್ಮಾವತಿ ನರಸಿಂಹಮೂರ್ತಿ, ಶ್ರೀನಿವಾಸ್, ವಾಸವಿ, ಸತೀಶ್, ಪ್ರದೀಪ್, ಸಾಗರ್ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ