LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ: ತನಿಖೆ ಕೈಗೆತ್ತಿಕೊಂಡ CBI

Advertisement

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ
ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರದ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಕೇಂದ್ರ ತನಿಖಾ ಸಂಸ್ಥೆಯು ಹೊಸದಾಗಿ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ನಿಯಮದಂತೆ, ರಾಜ್ಯ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನೇ ಆಧಾರವಾಗಿಟ್ಟುಕೊಂಡು ಸಿಬಿಐ ಮರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದೆ. ತನಿಖೆಯ ಅಂತ್ಯದಲ್ಲಿ ಸಂಸ್ಥೆಯು ನ್ಯಾಯಾಲಯಕ್ಕೆ ಆರೋಪಪಟ್ಟಿ ಅಥವಾ ಪ್ರಕರಣದ ಅಂತಿಮ ವರದಿ ಸಲ್ಲಿಕೆ ಮಾಡಲಿದೆ. ಈಗಾಗಲೇ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳು ಟೋಲ್ ಪ್ಲಾಜಾವೊಂದರಲ್ಲಿ ಯುಪಿಐ ಮೂಲಕ ಹಣ ಪಾವತಿಸಿದ್ದರು. ಈ ಡಿಜಿಟಲ್ ಪಾವತಿಯು ತನಿಯಾಧಿಕಾರಿಗಳಿಗೆ ಮೊಬೈಲ್‌ ಸಂಖ್ಯೆ ಮತ್ತು ಶಂಕಿತರ ಗುರುತನ್ನು ಪತ್ತೆಹಚ್ಚಲು ನೆರವಾಯಿತ.. ಸದ್ಯ ಕೊಲೆಯಲ್ಲಿ ಕನಿಷ್ಠ ಎಂಟು ಜನರು ಭಾಗಿಯಾಗಿದ್ದಾರ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತರ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ENS) ಅಡಿ ಹತ್ಯೆ, ಅಕ್ರಮ ಶಸ್ತ್ರಾಸ್ತ್ರಗಳ ಬಳಕೆ, ಕ್ರಿಮಿನಲ್‌ ಪಿತೂರಿ ಹಾಗೂ ಸಾಕ್ಷ್ಯ ನಾಶದ ಆರೋಪಗಳನ್ನು ಹೊರಿಸಲಾಗಿದೆ. ಈ ಹೊಲೆಯಲ್ಲಿ ಒಟ್ಟು ಎಂಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಹತ್ಯೆಗೂ ಮುನ್ನ ಆರೋಪಿಗಳು ರಫ್ ಅವರ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ