LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್ : ಮೂವರು ದುಷ್ಟ ಪೊಲೀಸರು ಅಮಾನತು 

Advertisement

ಬೆಳಗಾವಿ : ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ ಕಿರಣ ಡೊಕ್ಕಣ್ಣನವರ್ ಹಾಗೂ ಸಯ್ಯದ್ ತಹಶೀಲ್ದಾರ್ ಸಸ್ಪೆಂಡ್ ಆಗಿದ್ದಾರೆ.

ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಪೇದೆಗಳು ಅಮಾನತು ಪೊಲೀಸರ ಕಿರುಕುಳದಿಂದ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದ. ಶನಿವಾರ ಆದಿತ್ಯ ಮತ್ತು ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಗಾಂಜಾ ಸೇವನೆ ಆರೋಪದಲ್ಲಿ ವಶಕ್ಕೆ ಪಡೆದಿರುತ್ತಾರೆ. ಆಮೇಲೆ ಆದಿತ್ಯನನ್ನು ಪರಿಶೀಲನೆ ಮಾಡಿದಾಗ ವರದಿ ನೆಗೆಟಿವ್ ಬಂದಿತ್ತು.

ಪಾಸಿಟಿವ್ ಬಂದಂತಹ ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡಿದ ಆರೋಪ ಕೇಳಿ ಬಂದಿದ್ದು ನೆಗೆಟಿವ್ ಬಂದಿದ್ದ ಆದಿತ್ಯನ ಬಳಿ ಕೂಡ ಇವರು 2 ಸಾವಿರ ಹಣ ಕೇಳಿದ್ದರು.

ಹಣಕೊಡಲು ಆದಿತ್ಯನ ತಾಯಿ ನಿರಾಕರಿಸಿದ್ದಾರೆ. ಈ ಹಿನೆಲೆಯಲ್ಲಿ ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದೀಗ ಮೂವರನ್ನು ಸಸ್ಪೆಂಡ್ ಮಾಡಿ ಪೊಲೀಸ್ ಕುಮಾರ್ ಎನ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST