LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದಾಸರಹಳ್ಳಿಯಲ್ಲಿ ಸಮೃದ್ಧಿ ಸೂರಿ ಸೇವಾ ಟ್ರಸ್ಟ್ ಉದ್ಘಾಟಿಸಿದ : ಶಾಸಕ ಎಸ್ ಮುನಿರಾಜು

Advertisement

ಬೆಂಗಳೂರು : ಈಗಿನ ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ಕಟ್ಟುವುದು ಸುಲಭದ ಕೆಲಸ ಆದರೆ ಬೆಳಸುವುದು ಕಷ್ಟದ ಕೆಲಸ ಎಂದು ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.

ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮ ಸೇವಾ ಟ್ರಸ್ಟ್ ವತಿಯಿಂದ ನೂತನ ಸಮೃದ್ಧಿ ಸೂರಿ ಸೇವಾ ಟ್ರಸ್ಟ್  ಉದ್ಘಾಟನೆ ಮತ್ತು ಸಂಘದ ಗುರುತಿನ ಚೀಟಿ, ಪುರುಷ ಸದಸ್ಯರಿಗೆ ಟೀ ಶರ್ಟ್ ಮಹಿಳಾ ಸದಸ್ಯರಿಗೆ ಸೀರೆ ವಿತರಣೆ ಸಮಾರಂಭ ಟ್ರಸ್ಟಿನ ಅಧ್ಯಕ್ಷರು ಪದಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅವರು ಸಂಘದಲ್ಲಿ ಎಲ್ಲಾ ಸದಸ್ಯರು ಒಂದಾಗಿ ಒಗ್ಗಟ್ಟಾಗಿದಾಗ ಇದ್ದಾಗ ಸಂಘ ಸಂಸ್ಥೆಗಳು ಬೆಳೆಯಲಿಕ್ಕೆ ಸಾಧ್ಯ, ಅದಲ್ಲದೆ  ನಮ್ಮ ಕ್ಷೇತ್ರದಲ್ಲಿ ಸ್ತ್ರಿ ಶಕ್ತಿ ಸಂಘಗಳಿಗೆ 20ಲಕ್ಷಕ್ಕೂ ಹೆಚ್ಚು ಸಾಲ ಕೊಡಿಸಿದ್ದೇನೆ. ಈ ನೂತನ  ಟ್ರಸ್ಟಿನ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಸಮಾಜ ಮುಖಿಯಾಗಿ, ಸಮಾಜ ಅಭಿವೃದ್ಧಿಗಾಗಿ ಶ್ರಮ ವಹಿಸಿ ಟ್ರಸ್ಟ್ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶಾಸಕ ಎಸ್ ಮುನಿರಾಜು  ಟ್ರಸ್ಟಿನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಅಧ್ಯಕ್ಷ ಆರ್  ಪರಮೇಶ್ವರ ಸರ್ವರಿಗೂ ಸ್ವಾಗತಿಸಿದರು.

ಟ್ರಸ್ಟಿನ ಅಧ್ಯಕ್ಷೆ ಧರ್ಮದರ್ಶಿ ಕಮಲಾಕ್ಷಿ  ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಉಮಾದೇವಿ ನಾಗರಾಜ್,ರಾಜ್ಯಾಧ್ಯಕ್ಷ‌ ಕೃಷ್ಣಯ್ಯ    ಬಿಜೆಪಿ ಮುಖಂಡರಾದ ರಘು ಸೂರ್ಯ, ನಾಗಣ್ಣ, ಸುನಿತಾ ಬಾಯಿ, ಶೋಭಾ , ಯಶೋದಮ್ಮ ಮಂಜಣ್ಣ ಬಿ, ಸತೀಶ್ ಡಿಆರ್, ಪ್ರಕಾಶ್, ಸಚಿನ್, ರಾಜೇಶ್ ಸೇರಿದಂತೆ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST