LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶ್ರೇಷ್ಠ ಪ್ರಶಸ್ತಿ ಪಡೆದ ಶ್ರೀದೇವಿಗೆ ಸತ್ಕಾರ

Advertisement
ಐಗಳಿ : ಪ್ರಾಮಾಣಿಕವಾಗಿ ಸರಕಾರಿ ಸೇವೆ ಮಾಡುವದರಿಂದ ಸರಕಾರ ನಿಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಲಿದ್ದಾರೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಗೌಡ ಪಾಟೀಲ ಹೇಳಿದರು.

ಅವರು ಸ್ಥಳಿಯ ಪ್ರತಿಷ್ಠಿತ ಪಾಟೀಲ ಮನೆತನದವರು ಹಮ್ಮಿಕೊಂಡಿದ್ದ ಸಾಧಕರಿಗೆ ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ ಅಂಚೆ ಇಲಾಖೆಯಲ್ಲಿ ಶ್ರೇಷ್ಠ ಪ್ರಶಸ್ತಿಗೆ ಭಾಜಿನರಾಗಿದ ಶ್ರೀಮತಿ ಶ್ರೀದೇವಿ ರಾಜು ಹುಲ್ಯಾಳಕರ ಇವರಿಗೆ ಸನ್ಮಾನ ನೆರವೇರಿಸಿ ಮಾತನಾಡಿ ಸಪ್ತಸಾಗರ ಗ್ರಾಮದಲ್ಲಿ ಪೋಸ್ಟ ಮಾಸ್ತಿರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀದೇವಿಯ ಕಾರ್ಯ ಉಳಿತಾಯ ಖಾತೆ, ಆರ್.ಡಿ. ಮಾಡಿಸುವ ಪ್ರಯತ್ನ ಹೀಗೆ ಅನೇಕ ಕಾರ್ಯ ನೋಡಿ ಅಂಚೆ ಇಲಾಖೆ ಇವರಿಗೆ ಪ್ರಶಸ್ತಿ ನೀಡಿದ್ದಾರೆ ಇವರ ತಂದೆ ಎಸ್.ಎಮ್.ಜನಗೌಡ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುವದರ ಜೊತೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ ಒಟ್ಟಾರೆ ತಂದೆಯಂತೆ ಮಗಳು ಇದ್ದಾರೆ ತಂದೆ ಮಾರ್ಗದರ್ಶನದಲ್ಲಿ ನಡೆದಿದ್ದಾರೆ ಎಂದರು.

ಶ್ರೀದೇವಿ ರಾಜು ಹುಲ್ಯಾಳಕರ ಬಿ.ಪಿ.ಎಮ್ ಇವರಿಗೆ ಪಾಟೀಲ ಸಹೋದರಿಯರು ಸನ್ಮಾನ ಮಾಡಿದರು ಈ ವೇಳೆ ಡಾ|| ಗೀತಾ ಪಾಟೀಲ, ಭಾರತಿ ಪಾಟೀಲ, ಅನಸೂಯಾ ಪಾಟೀಲ, ಚನ್ನಕ್ಕಾ ಪಾಟೀಲ, ಸುವರ್ಣಾ ಪಾಟೀಲ, ರೇಖಾ ಪಾಟೀಲ, ದಾನಮ್ಮಾ ಪಾಟೀಲ, ಸುಮಾ ಪಾಟೀಲ, ಮಹಾನಂದಾ ಪಾಟೀಲ ಸೇರಿದಂತೆ ಅನೇಕರು ಇದ್ದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST