LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಶಾಂತಿ,ಸೌಹಾರ್ದತೆಯಿಂದ ಬಕ್ರೀದ್ ಆಚರಿಸಲು ಪೊಲೀಸರಿಂದ ಶಾಂತಿಸಭೆ

Advertisement

ಗೋಕಾಕ : ಬಕ್ರೀದ್ ಹಬ್ಬದ ಪ್ರಯುಕ್ತ  ನಗರದ ತಾಲುಕಾ ಪಂಚಾಯತ ಸಭಾ ಭವನದಲ್ಲಿ ಗೋಕಾಕ ಗ್ರಾಮೀಣ ಮತ್ತು ಶಹರ ಪೋಲಿಸ್ ಠಾಣೆ  ಅಧಿಕಾರಿಗಳು ಧಾರ್ಮಿಕ ಮುಖಂಡರಗಳ ಜೊತೆ  ಶಾಂತಿ ಸಭೆ ನಡೆಸಿದರು.

ಇವತ್ತು ನಡೆದ ಶಾಂತಿ ಸಭೆಯಲ್ಲಿ ಗೋಕಾಕ ಶಹರ ಪಿಎಸ್ಐ ಕಿರಣ ಮೊಹಿತೆ  ಮಾತನಾಡಿ, ಯಾವುದೇ ಕಾರಣಕ್ಕೂ ಎತ್ತು, ಹಸು, ಎಮ್ಮೆ ಹಾಗೂ ಕೋಣ ಮತ್ತಿತರರ ಪ್ರಾಣಿಗಳನ್ನು ವಧೆ ಮಾಡಬಾರದು. ಅಕಸ್ಮಾತ್ತಾಗಿ ಎಲ್ಲಿಯಾದರೂ ವಧೆ ಮಾಡಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಹಬ್ಬದ ಅಥವಾ ಇನ್ನಿತರೆ ಸಂಧರ್ಭಗಳಲ್ಲಿ ಯಾರೇ ಆಗಲಿ ಅನ್ಯ ಕೋಮಿನ ಧರ್ಮಗಳ ವಿರುದ್ಧ ಸೊಸಿಯಲ್ ಮಿಡಿಯಾದಲ್ಲಿ ಅವಹೇಳನ ಮಾಡುವುದು. ಹಿಂಸೆಗೆ ಪ್ರಚೋದನೆ ಮಾಡುವುದು. ಸಮಾಜದಲ್ಲಿ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ವರ್ತಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಅದರ ಬೆನ್ನಲ್ಲೆ ಇವತ್ತು ಗೋಕಾಕ ನಗರದಲ್ಲಿ ವಧೆ ಮಾಡಲು ತಂದಿದ್ದ ಎತ್ತುಗಳನ್ನು ಪಿಎಸ್ಐ ಕಿರಣ ಮೊಹಿತೆ ಮರಳಿ ರೈತರಿಗೆ ನೀಡಿ ಮಾನವಿಯತೆ ಮೆರೆದರು.
news_1779703969_0_465.webp

 

ಇನ್ನು ಗ್ರಾಮೀಣ ಪಿಎಸ್ಐ ಕೆ,ವಾಲಿಕಾರ ಮಾತನಾಡಿ ಮಾತನಾಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಹಬ್ಬ ಆಚರಿಸಬೇಕು.ಪ್ರಾರ್ಥನೆ ಸಮಯದಲ್ಲಿ  ಹಾಗೂ ಮೆರವಣಿಗೆ ಸಮಯದಲ್ಲಿ ನಿಗದಿತ ದಾರಿಯಲ್ಲೇ ಮೆರವಣಿಗೆ ಸಾಗಬೇಕು. ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ಮೂಡಿಸಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.

ಈ ಸಂದರ್ಬದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆರ್, ಸುರೇಶಬಾಬು,ಸಿಬ್ಬಂದಿಗಳಾದ ಡಿಜಿ ಕೊಣ್ಣೂರ, ಗೋಕಾಕ ಜಾತ್ರಾ ಕಮಿಟಿಯ ಅದ್ಯಕ್ಷಕರು, ಮುಸ್ಲಿಂ ಮುಖಂಡರುಗಳು ಸೇರಿದಂತೆ ಗ್ರಾಮೀಣ ಬಾಗದ ಮುಖಂಡರುಗಳು,ಇನ್ನೂಳಿದವರು ಈ ಶಾಂತಿಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ:ಮನೋಹರ ಮೇಗೇರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST