LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅನಾಥಾಶ್ರಮ ನಡೆಸುತ್ತಿರುವವರ ಮೇಲೆ ಬಜಂತ್ರಿ ಕುಟುಂಬಸ್ಥರಿಂದ ದಬ್ಬಾಳಿಕೆ

ದಾಖಲೆಗಳಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು

Advertisement

ಗೋಕಾಕ : ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿದ್ದ   ಅಮಾಯಕರ ಮೇಲೆ ದಬ್ಬಾಳಿಕೆ ಮಾಡಿ ಹೊರಹಾಕಿದ್ದಾರೆಂದು ಅನಾಥಾಶ್ರಮ ,ವೃದ್ದಾಶ್ರಮ ನಡೆಸುತ್ತಿರುವ ಕುಮಾರ ಕೊಣ್ಣೂರ ಮತ್ತು ದನ್ಯಕುಮಾರ ಮೇಗೇರಿ ಇವರು ಗೋಕಾಕದ ಅನಾಥಾಶ್ರಮ ಮುಂದೆ  ನಡೆದ ಪತ್ರಿಕಾಗೋಷ್ಠಿಯಲ್ಲಿ  ಬಜಂತ್ರಿ ಕುಟುಂಬಸ್ಥರ ವಿರುದ್ದ ಆರೋಪಿಸಿದ್ದಾರೆ.

ಇನ್ನು ಈ ಕಟ್ಟಡದಲ್ಲಿ ಶಾಲೆ ಇದೆಯೆಂದು ಸುಳ್ಳು ಹೇಳಿ ಅಧಿಕಾರಿಗಳ ದಾರಿ ತಪ್ಪಿಸುತಿದ್ದಾರೆ. ಈಗಾಗಲೆ ಕಟ್ಟಡದ ಖರೀದಿಯ ಎಲ್ಲ ದಾಖಲೆಗಳು, ಮುಂದೆ ಯಾವುದೆ ತಂಟೆ ತಕರಾರು ಮಾಡುವುದಿಲ್ಲವೆಂದು ಬರೆದು ಕೊಟ್ಟ ಕುಟುಂಬಸ್ಥರ ಸಮ್ಮತಿ ಪತ್ರ ಇದ್ದರೂ ಅನಾಥಾಶ್ರಮ,ವೃದ್ದಾಶ್ರಮದಲ್ಲಿದವರ ಮೇಲೆ ದಬ್ಬಾಳಿಕೆ ಮಾಡುತಿದ್ದಾನೆಂದರು.

ಶಾಲೆ ಇದೆ ಎಂದು ಹೇಳಿದ್ದರ ಬೆನ್ನಲ್ಲೇ ಶಾಲೆಗೆ ಸಂಬಂದಪಟ್ಟ ಚಿಕ್ಕೋಡಿ DDPI ಗೆ ಮನವಿ ನೀಡಿದರೂ ಸಹ ಅವರೂ ಕೂಡ ತನಿಖೆ ಮಾಡಲು ವಿಳಂಬ ಮಾಡುತಿದ್ದಾರೆಂದು ಆರೋಪಿಸಿದರು.

ಕಟ್ಟಡದ ಮೇಲೆ ಹಾಕಿದ್ದ ಅನಾಥಾಶ್ರಮ ಬ್ಯಾನರ ಹರಿದು ಅಮಾಯಕರ ಮೇಲೆ ಪರಸ್ಥಗಳಿಂದ ಜನರನ್ನು ಕರೆಯಿಸಿ ಹಲ್ಲೆ ಮಾಡಿಸುತಿದ್ದಾನೆ, ಒಳಗಡೆ ಹೊಗದಂತೆ ಗೇಟಗಳಿಗೆ ಬೀಗ ಹಾಕಿ ದರ್ಪತೊರಿದ್ದಾನೆ.
ಇದರ ಬಗ್ಗೆ  ನಗರ ಪೋಲಿಸರು ಕ್ರಮ ಕೈಗೊಳ್ಳಬೇಕೆಂದು ಬೇಡಿಕೊಂಡರು. 

ಅದರ ಜೊತೆಯಲ್ಲಿ ಮಹಿಳೆಯರು ಅನಾಥಾಶ್ರಮದ ಒಳಗೆ ಮಲಗಿಕೊಳ್ಳಲು ಹೋಗುವಾಗ ಒಳಗಿನಿಂದ ಗೇಟಗಳಿಗೆ ಬೀಗ ಹಾಕಿದ್ದರಿಂದ ಇಡಿ ರಾತ್ರಿ ಕಟ್ಟಡದ ಹೊರಗಡೆ ಮಲಗಿಕೊಳ್ಳುವ ಹಾಗೆ ಮಾಡಿದ್ದಾರೆ. ಇಷ್ಟಾದರೂ ಸಹ ಅಧಿಕಾರಿಗಳೂ ಮಾತ್ರ ಇತ್ತ ತಲೆ ಹಾಕದೆ ಕುಳಿತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಈ ಸಂದರ್ಭದಲ್ಲಿ ಶೆಟ್ಟೆಪ್ಪ ಮೇಸ್ತ್ರಿ, ಮುತ್ತುರಾಜ ಮೇಗೇರಿ, ಚನ್ನಬಸವರಾಜ ಕೊಳ್ಯಾಗೋಳ, ಸುಭಾಸ ಕಾಮೆವಾಡಿ, ಮಹಾಲಿಂಗ ಕಳಸನ್ನವರ ಸೇರಿದಂತೆ ಇನ್ನುಳಿದವರು ಪತ್ರಿಕಾಗೋಷ್ಠಿಯಲ್ಲಿ ಬಾಗಿಯಾಗಿದ್ದರು.

 ವರದಿ:ಮನೋಹರ ಮೇಗೇರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST