LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಉಪ್ಪು ನೀರು ಬೇಡ, ಸಿಹಿ ನೀರು ಸರಬರಾಜು ಮಾಡಿ : 11 ನೇ ವಾರ್ಡಿನ ನಾಗರೀಕರ ಆಗ್ರಹ

Advertisement

ತುರುವೇಕೆರೆ : ಕಳೆದ ಆರು ತಿಂಗಳಿAದ ಪಟ್ಟಣ ಪಂಚಾಯ್ತಿ ವತಿಯಿಂದ ಉಪ್ಪು ನೀರನ್ನು ಸರಬರಾಜನ್ನು ಮಾಡುತ್ತಿದ್ದು, ನಮಗೆ ಮೊದಲಿನಂತೆ ಮಲ್ಲಾಘಟ್ಟ ಕೆರೆಯ ಸಿಹಿ ನೀರನ್ನೇ ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಪಟ್ಟಣದ 11 ನೇ ವಾರ್ಡಿನ ನಾಗರೀಕರು ತಹಸೀಲ್ದಾರ್ ಕುಂಇ ಅಹಮದ್ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಅವರಿಗೆ ಮನವಿ ಸಲ್ಲಿಸಿದರು.

ಮಲ್ಲಾಘಟ್ಟ ಕೆರೆಯ ಸಿಹಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು, ಆದರೀಗ ಉಪ್ಪು ನೀರನ್ನು ಬಿಡುತ್ತಿರುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ೬ ದಿನಕ್ಕೊಮ್ಮೆ ನೀರು ಬಿಡುವುದರಿಂದ ನೀರಿನ ಸಮಸ್ಯೆ ಉದ್ಭವವಾಗಿದೆ. ಉಪ್ಪು ನೀರು ಕುಡಿಯಲು ಯೋಗ್ಯವಾಗಿಲ್ಲ. ವಾರ್ಡಿನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿ ಸ್ವಚ್ಛಗೊಳಿಸಿಲ್ಲ, ಚರಂಡಿಯ ಇಕ್ಕೆಲಗಳಲ್ಲಿ ಗಿಡಗಂಟೆ ಬೆಳೆದು ನಿಂತಿದೆ. ಪಟ್ಟಣ ಪಂಚಾಯ್ತಿ ಸ್ವಚ್ಛಗೊಳಿಸದಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕದಲ್ಲಿದ್ದೇವೆ ಎಂದು ನಾಗರೀಕರು ದೂರಿದರು.

news_1782819039_0_936.webp

 

ಕೂಡಲೇ ತಾಲೂಕು ದಂಡಾಧಿಕಾರಿಗಳು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಗಮನಹರಿಸಿ ವಾರ್ಡಿಗೆ ಮೊದಲಿನಂತೆ ಮಲ್ಲಾಘಟ್ಟ ಸಿಹಿ ನೀರನ್ನು ನಾಲ್ಕು ದಿನಕ್ಕೊಮ್ಮೆ ಸರಬರಾಜು ಮಾಡಬೇಕು, ವಾರ್ಡಿನ ಚರಂಡಿ ಹಾಗೂ ಬೆಳೆದು ನಿಂತಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ನಾಗರೀಕರ ಆರೋಗ್ಯ ಹಾಳಾಗದಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ನಾಗರೀಕರಾದ ಮಿಲ್ ಸುರೇಶ್, ಅಶೋಕ್, ಶಂಕರ್, ಬಿಜೆಪಿ ನಗರ ಅಧ್ಯಕ್ಷ ರಾಘವೇಂದ್ರ, ಸಾಗರ್ ಯಾದವ್, ಗೋಪಾಲಕೃಷ್ಣ, ಅನ್ವರ್, ಸತೀಶ್ ಸೇರಿದಂತೆ ವಾರ್ಡಿನ ಮಹಿಳೆಯರು, ನಾಗರೀಕರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST