LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಾರಿ ಶಕ್ತಿ ವಂದನ ಮಸೂದೆಗೆ ಹಿನ್ನಡೆ ಜೆಡಿಎಸ್ ಬೃಹತ್ ಪ್ರತಿಭಟನೆ!

Advertisement
ಸಿಂಧನೂರು : ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ನಾರಿ ಶಕ್ತಿ ವಂದನ ಮಸೂದೆ ಅಥವಾ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಗತ್ಯವಾದ 2/3 ಬಹುಮತವನ್ನು ಪಡೆಯಲು ವಿಫಲವಾದ ಹಿನ್ನೆಲೆ ಈ ವಿಷಯದ ವಿರುದ್ಧವಾಗಿ ಮತ ಚಲಾಯಿಸಿದವರ ವಿರುದ್ಧ ಜೆಡಿಎಸ್ ಪಕ್ಷ ವತಿಯಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ನೇತೃತ್ವದಲ್ಲಿ ನೂರಾರು ಮಹಿಳೆಯರು ನಗರದ ತಹಸೀಲ್ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಅವರು 2026 ರ ಏಪ್ರಿಲ್ 17ರಂದು ನಡೆದ ಮತದಾನದಲ್ಲಿ 2/3 ಬಹುಮತದ ಅಗತ್ಯವಿದ್ದರೂ ವಿರೋಧ ಪಕ್ಷಗಳ ವಿರೋಧದಿಂದಾಗಿ ಮಸೂದೆ
ಅಂಗಿಕಾರವಾಗದೇ ವಿಫಲವಾಗಲು ವಿಪಕ್ಷಗಳೇ ಕಾರಣವೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ,1986 ರಲ್ಲಿ ಎಚ್ ಡಿ. ದೇವೇಗೌಡರು ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡಲು 33% ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರು ಆದರೆ ಈಗ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಮಹಿಳಾ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ ಈ ಮಸೂದೆ ಮಹಿಳೆಯರ ದಶಕಗಳ ಕನಸಾಗಿದ್ದರೂ ರಾಜಕೀಯ ಒಮ್ಮತದ ಕೊರತೆಯಿಂದಾಗಿ ಜಾರಿಗೆ ತಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ: ಜೆಡಿಎಸ್ ಎಸ್ಸಿ ಘಟಕ ಜಿಲ್ಲಾ ಕಾರ್ಯಾಧ್ಯಕ್ಷ ಅಲ್ಲಮಪ್ರಭು ಪೂಜಾರ್. ಜೆಡಿಎಸ್ ನಗರ ಘಟಕ ಅಧ್ಯಕ್ಷ ರವಿಗೌಡ ಪನ್ನೂರು. ಕೆ.ಜಲಾನಿ ಪಾಷಾ. ಮಾಜಿ ನಗರಸಭೆ ಅಧ್ಯಕ್ಷೆ ಪದ್ದಮ್ಮ. ತಾಜ್ ಅಂಜುಮ್. ಸುಜಾತ. ನಾಗಜ್ಯೋತಿ.ಚಂದ್ರಕಲಾ. ವಿಜಯಲಕ್ಷ್ಮಿ. ವೆಂಕಟೇಶ್ ಗಿರಿಜಾಲಿ. ಜಗದೀಶ್ ವಕೀಲರು. ಎಸ್ ಬಿ. ರೆಡ್ಡಿ. ವೆಂಕಟೇಶ್ ನಂಜಲದಿನ್ನಿ. ನಿರುಪಾದಪ್ಪ ನಾಗಲಾಪುರ.ಅಶೋಕ್ ಗದ್ರಟಗಿ. ಲಕ್ಷ್ಮಣ ಭೋವಿ.ಪ್ರಕಾಶ್ ಬಾಬು. ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

ವರದಿ: ಬಸವರಾಜ ಬುಕ್ಕನಹಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST