LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತಂಗಡಿಯಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ

Advertisement

ಐನಾಪುರ:ಬೇಳಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ಮಕ್ಕಳಿಗೆ ಲಾಲನೆ, ಪಾಲನೆ,  ಪೋಷಣೆ ಅಂಗನವಾಡಿ ಕೇಂದ್ರದಲ್ಲಿ ಅತಿಮುಖ್ಯವಾಗಿದೆ. ಆದ್ದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಾಂಗ್ರಸ ಪಕ್ಷದ ಯುವ ನಾಯಕ  ಚಿದಾನಂದ ಸವದಿ ಹೇಳಿದರು.
ಅವರು  17 ರಂದು  ಸಮೀಪದ ತಂಗಡಿ ಗ್ರಾಮದ  ಶಿವಾಜಿ ನಗರದ ಬಾರಿಗಡ್ಡಿಯಲ್ಲಿ ಅಭಿವೃದ್ಧಿ ಇಲಾಖೆ ವತಿಯಿಂದ ₹12 ಲಕ್ಷ ಹಾಗೂ ನರೇಗಾ ಯೋಜನೆಯಡಿ ₹8 ಲಕ್ಷ ಒಟ್ಟು 20 ಲಕ್ಷ ರೂ ಗಳ ಅನುದಾನದಲ್ಲಿ ಮಂಜೂರಾದ ನೂತನ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಾ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅವರ ಮನಸ್ಸಿನಲ್ಲಿ ಯಾವ ರೀತಿ ಬದಲಾವಣೆ ತರಬೇಕೆಂಬ ದೃಷ್ಟಿ ಇಟ್ಟುಕೊಂಡು ಪಾಠ ಮಾಡಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವಿದ್ಯಾಭ್ಯಾಸ ನೀಡುವ ಅಂಗನವಾಡಿ ಕೇಂದ್ರ ದೇವಸ್ಥಾನವಿದ್ದಂತೆ  ಆದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು.

news_1781696206_0_419.webp

 

 

ಯಾವುದೇ ಲೋಪ ದೋಷಗಳು ಉಂಟಾಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದ ಅವರು.ತಂಗಡಿ ಗ್ರಾಮದ ರಮೇಶ ಹರಿ ಪಾಟೀಲ  ಸಣ್ಣ ರೈತ ಆದರೆ ದೊಡ್ಡ ಮನಸ್ಸು ಮಾಡಿ ಅಂಗನವಾಡಿ ಶಾಲೆ ಇಗಲ್ಲೋ ಆಗಲ್ಲೊ ಬಿಳುವ ಹಂತದಲ್ಲಿರುವ ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳು ಹೇಗೆ ಕಲಿಯುತ್ತೇವೆ ಎಂದು ಮನಗಂಡು ತನ್ನ ಜಮೀನಿನಲ್ಲಿ ಜಾಗ ನೀಡಿದಲ್ಲದೆ ಸ್ವಂತ ಖರ್ಚಿನಿಂದ ಪತ್ರಾಸ ಶೇಡನಲ್ಲಿ ಅಂಗನವಾಡಿ ನಿರ್ಮಿಸಿರುವದನ್ನು ಕಂಡು ಮಚ್ಚುಗೆ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ಇಒ ವಿರಣ್ಣಾ ವಾಲಿ, ಭೂದಾನಿ ರಮೇಶ ಪಾಟೀಲ ಗ್ರಾಪಂ ಸದಸ್ಯ ಚೇತನ ಗಾಯಕವಾಡ ,ಭರತ ಪಾಟೀಲ, ಕಿರಣ ಪಾಟೀಲ,  ಶ್ರೀಕಾಂತ  ಪಾಟೀಲ, ದಿಲೀಪ್ಪ ಪಾಟೀಲ, ಪರಶುರಾಮ ಸಾಳುಂಕೆ, ಸಾಗರ ಪಾಟೀಲ, ಅಣ್ಣಾಸಾಬ ಚೌಗಲಾ ಆಸ್ಕರ ಪಠಾಣ, ಮಹಿಬೂಬ ಇನಾಮದಾರ, ಪಿಂಟು ಮಗದುಮ್ಮ,ವಸಂತ ಮೋರೆ,ಬಾಳಕೃಷ್ಣ ಪಾಟೀಲ, ಮಲ್ಲಪ್ಪಾ ನಾಯಿಕ, ಗುತಿಗೆದಾರ ಬಸಗೌಡಾ ಪಾಟೀಲ,ಅಂಗನವಾಡಿ ಶಿಕ್ಷಕಿ ಜೆ ಎನ್ ಇನಾಮದಾರ ಸೇರಿದಂತೆ ಇತರರು ಇದ್ದರು.


ವರದಿ :ಮುರಗೇಶ ಗಸ್ತಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST