LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರುದ್ರಸ್ವಾಮಿ ಮೂರ್ತಿ ಸಕಲ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ

Advertisement
ಚನ್ನಮ್ಮನ ಕಿತ್ತೂರು  : ಕಿತ್ತೂರಿನ ಸೋಮವಾರ ಪೇಟೆಯ ಸರಪಳಿ ಓಣಿಯ ಶ್ರೀ ರುದ್ರಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 22 ಮತ್ತು 23 ರಂದು ಶ್ರೀ ರುದ್ರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಣ ಮಹೋತ್ಸವವು ಜರುಗಲಿದೆ. ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಗುರು ಮಡಿವಾಳಶ್ವರ ಮಠದ ಪಂಚಾಕ್ಷರಿ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.

ಕಿತ್ತೂರು ಕೋಟೆ ಆವರಣದಲ್ಲಿ ಇರುವ ಗ್ರಾಮ ದೇವಿ ದೇವಸ್ಥಾನದಿಂದ ರುದ್ರಸ್ವಾಮಿ ಮೂರ್ತಿಯನ್ನು ಸಕಲ ವಾದ್ಯ ಮೇಳದೊಂದಿಗೆ, ಕುಂಭಮೇಳ ದೊಂದಿಗೆ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮವಾರ ಪೇಟೆಯ ಸರಪಳಿ ಓಣಿಯ ರುದ್ರಸ್ವಾಮಿ ದೇವಸ್ಥಾನಕ್ಕೆ ಬಂದು ಮೆರವಣಿಗೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಾಹತೇಂಶ ದೊಡ್ಡಗೌಡರ, ಯುವಕರು, ಮಹಿಳೆಯರು, ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST