LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸ್ನೇಹ ಸಮ್ಮೇಲನ ಹಾಗೂ "ಗುರುಶ್ರೀ" ಪ್ರಶಸ್ತಿ ಪ್ರದಾನ ಸಮಾರಂಭ : ಮಹೇಶಾನಂದ ಶ್ರೀಗಳು.

Advertisement
ಕಾಗವಾಡ : ಗಡಿ ಭಾಗದಲ್ಲಿ ಇಬ್ಬರೂ ಮಹಾನ ಸಂತರ ಪ್ರೇರಣೆ, ಆಶೀರ್ವಾದಿಂದ ಪ್ರಾರಂಭಗೊAಡಿರುವ ಶಿಕ್ಷಣ ಸಂಸ್ಥೆಯಲ್ಲಿ ಪಡೆದುಕೊಂಡ ವಿದ್ಯಾಭೂಷಣ ಮತ್ತು ಗುರುಶ್ರೀ ಪ್ರಶಸ್ತಿಗಳು, ದಿಲ್ಲಿಯಲ್ಲಿ ಪಡೆದುಕೊಳ್ಳುವ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗಿಂತಲೂ ಮಹತ್ವದ್ದಾಗಿವೆಯೆಂದು ಹಂಚಿನಾಳದ ಭಕ್ತಿ ಯೋಗಾಶ್ರಮದ ಪಪೂ ಮಹೇಶಾನಂದ ಮಹಾಸ್ವಾಮಿಗಳು ಹೇಳಿದ್ದಾರೆ. ಅವರು, ರವಿವಾರ ದಿ. 11 ರಂದು ಪಟ್ಟಣದ ವಿದ್ಯಾವರ್ಧಕ ಸಮಿತಿ ಸಿಬ್ಬಂದಿಗಳ ಒಕ್ಕೂಟದಿಂದ ವ್ಹಿ.ವ್ಹಿ. ಸಮಿತಿಯ ಶಿಕ್ಷಕರಿಗೆ ವಿದ್ಯಾಭೂಷಣ ಮತ್ತು ಗುರುಶ್ರೀ ಪ್ರಶಸ್ತಿ ಪ್ರಧಾನ ಮತ್ತು ಶೈಕ್ಷಣಿಕ ಚಿಂತನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.

50 ವರ್ಷಗಳ ಹಿಂದೆ ಗಡಿ ಭಾಗದಲ್ಲಿ ಏನು ಅಭಿವೃದ್ಧಿ ಇಲ್ಲದ ಕಾಲದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ನಿಮ್ಮೆಲ್ಲರಿಗೆ ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಪ್ರೇರಣೆ ನೀಡಿದ್ದರಿಂದ ಇಲ್ಲಿಯ ಶಿಕ್ಷಕರ ಸೇವೆಯಿಂದ ಗಡಿಭಾಗದಲ್ಲಿ ಜ್ಞಾನದ ಹೊಳೆ ಹರಿಯಿತು. ಆದ್ದರಿಂದ ಅಂತಹ ಶಿಕ್ಷಕರಿಗೆ ವಿದ್ಯಾಶ್ರೀ ಮತ್ತು ಗುರುಶ್ರೀ ಪ್ರಶಸ್ತಿ ನೀಡುತ್ತಿರುವ ಕಾರ್ಯ ನಿಜಕ್ಕೂ ಅಭಿನಂದನೀಯವಾಗಿದೆ ಎಂದರು.

ವ್ಹಿ.ವ್ಹಿ. ಸಮಿತಿಯ ಶಾಲಾ ಆಡಳಿತ ಅಧಿಕಾರಿ ಬಿ.ಡಿ. ಪಾಟೀಲ ಅಧ್ಯಕ್ಷತೆ ವಹಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾಗಿ ಬೆಳಗಾವಿ ಲಿಂಗರಾಜ ಕಾಲೇಜಿನ ನಿವೃತ್ ಪ್ರಾಚಾರ್ಯ ರಾಯಗೌಡಾ ಪಾಟೀಲ ತಮ್ಮ ಅನಿಸಿಕೆ ಹಂಚಿಕೊAಡರು. ಪಪೂ ಮಲ್ಲಿಕಾರ್ಜುನ ಶ್ರೀಗಳ, ಸಿದ್ದೇಶ್ವರ ಶ್ರೀಗಳ ಮತ್ತು ಬಾಬಾಗೌಡಾ ಪಾಟೀಲ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಶಿಕ್ಷಕ ಚಂದ್ರಕಾAತ ಒಂಟೆ ಅವರಿಗೆ ವಿದ್ಯಾಭೂಷಣ ಮತ್ತು ಶಿಕ್ಷಕರಾದ ಆರ್.ಟಿ. ಗುರುವ, ಬಸವರಾಜ ಕರೆಪ್ಪಗೋಳ, ಕೃಷ್ಣಾ ಚವ್ಹಾನ, ಅನ್ನಪೂರ್ಣಾ ಪಾಟೀಲ, ರತ್ನಾಬಾಯಿ ಐನಾಪೂರೆ, ರೂಪಾ ಪಾಟೀಲ, ಅಶ್ವಿನಿ ಮೆಟಗೋಳೆ ಇವರಿಗೆ ವಿದ್ಯಾಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ವ್ಹಿ.ವ್ಹಿ. ಸಮಿತಿಯ ಅಧ್ಯಕ್ಷ ಬಸಗೌಡಾ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಅಧ್ಯಕ್ಷ ಸಾತಗೌಡಾ ಪಾಟೀಲ, ವ್ಹಿ.ವ್ಹಿ. ಸಮಿತಿಯ ಕಾರ್ಯದರ್ಶಿ ಹಾಗೂ ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಸಪ್ನಿಲ ಪಾಟೀಲ, ಆರ್.ಎಂ. ಪಾಟೀ¯, ಸೌರಭ ಪಾಟೀ¯, ಈರಗೌಡಾ ಪಾಟೀಲ, ಎಸ್.ಡಿ. ಬುವಾ ಹಾಗೂ ವಿದ್ಯಾವರ್ಧಕ ಸಮಿತಿಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ :  ಚಂದ್ರಕಾಂತ ಕಾಂಬಳೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಕಲವಾರ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು, ಫಾರ್ಮ್-9 ಮತ್ತು ಫಾರ್ಮ್-11 ವಿತರಣೆಯಲ್ಲಿ ಸಾರ್ವಜನಿಕ  ಆಕ್ರೋಶ ಅಂಗನವಾಡಿ ಕೇಂದ್ರಗಳು, ರಸಗೊಬ್ಬರ ವಿತರಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ : ಸಂತೋಷ ಲಾಡ್ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲು