LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಟಕಾ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಗಡಿಪಾರು

Advertisement
ಕಾಗವಾಡ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಓ.ಸಿ ಮಟಕಾ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ರೂಢಿಗತ ಆರೋಪಿತರನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಓ.ಸಿ ಮಟಕಾ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಓ,ಸಿ ಮಟಕಾ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಧಕ್ಕೆ ಹಾಗೂ ಸಮಾಜದ ಸ್ವಾಸ್ಥಕ್ಕೆ ಧಕ್ಕೆಯುಂಟು ಮಾಡುತ್ತಿರುವ ಬಗ್ಗೆ ಕಂಡು ಬಂದಿದ್ದರಿಂದ ಈ ಕೆಳಗಿನ ರೂಢಿಗತ ಆರೋಪಿತರಾದ

1] ಮನೋಜ ರುದ್ರಪ್ಪ ಕಾಂಬಳೆ ಸಾ: ಮೋಳೆ ತಾ: ಕಾಗವಾಡ

2] ಶಭೀರ ಬಾದಷಾ ಪಠಾಣ ಸಾ: ಉಗಾರ ಖುರ್ದ ತಾ:ಕಾಗವಾಡ

ಇವರಿಗೆ ಮಾನ್ಯ ಉಪವಿಭಾಗೀಯ ದಂಡಾಧಿಕಾರಿಗಳು ಚಿಕ್ಕೋಡಿ ಉಪ ವಿಭಾಗ ಚಿಕ್ಕೋಡಿ ರವರು ದಿನಾಂಕ: 01-04-2026 ರಂದು ಕರ್ನಾಟಕ ಪೊಲೀಸ ಕಾಯಿದೆ-1963 ರ ಕಲಂ: 55 ಮತ್ತು 56(ಜಿ) ರನ್ವಯ ಸದರಿ ಮೇಲಿನ ಆರೋಪಿತರಿಗೆ 03 ತಿಂಗಳ ಅವಧಿಗೆ ವಿಜಯಪುರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಮಾಡಿರುತ್ತಾರೆ. ಆ ಪ್ರಕಾರ ನಾವು 1] ಮನೋಜ ರುದ್ರಪ್ಪ ಕಾಂಬಳೆ ಸಾ: ಮೋಳೆ ತಾ: ಕಾಗವಾಡ ಇತನಿಗೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ ಠಾಣೆ ವ್ಯಾಪ್ತಿಗೆ 2) ಶಬ್ಬರ ಬಾದಪಾ ಪಠಾಣ ಸಾ: ಉಗಾರ ಖುರ್ದ ತಾ:ಕಾಗವಾಡ ಇವನಿಗೆ ವಿಜಯಪುರ ಜಿಲ್ಲೆಯ ಗಾಂಧಿ ಚೌಕ ಪೊಲೀಸ ಠಾಣೆ ವ್ಯಾಪ್ತಿಗೆ ಸ್ಥಳಾಂತರಿಸಲಾಗಿದೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದಕ್ಕಾಗಿ ಮೇಲ್ಕಂಡ 02 ಜನ ರೂಢಿಗತ ಆರೋಪಿತರನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಇನ್ನು ಮುಂದೆಯೂ ಸಹ ಇದೇ ರೀತಿ ರೂಢಿಗತ ಆರೋಪಿತರ ವಿರುದ್ದ ಮೇಲೆ ಕಠಿಣ ಕ್ರಮಗಳನ್ನು ಕೈಗೋಳ್ಳಲಾವುದು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST