LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಸಂಸ್ಕೃತಿ ಸಂಸ್ಕಾರ ಇನ್ನು ಗಟ್ಟಿಯಾಗಿದೆ : ಡಾ. ಪಿ.ಜಿ.ಕೆಂಪಣ್ಣವರ

Advertisement
ನಿಪ್ಪಾಣಿ : ಶಾಲೆಗಳಿಗಿಂತಲೂ ಗಡಿ ಭಾಗದ ಶಾಲೆಗಳಲ್ಲಿ ಸಂಸ್ಕೃತಿ ಸಂಸ್ಕಾರ ಪರಂಪರೆ ಇನ್ನೂ ಅಡಗಿದೆ ಶಾಲೆಗಳಲ್ಲಿ ನಮ್ಮ ಪೂರ್ವಜರು ಸಂಪ್ರದಾಯ ಪರಂಪರೆ ಪಾಲಕರಿಗೆ ನೀಡುವ ಆದರದ ಭಾವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಅಧ್ಯಯನದ ಜೊತೆಗೆ ಕಲಿಸುವ ಜ್ಞಾನ ಗಟ್ಟಿಯಾಗಿದೆ ಇಂತಹ ಶಾಲೆಗಳ ಹಿರಿಮೆ ಬೆಳೆಸುವ ಜವಾಬ್ದಾರಿ ಪಾಲಕರು ಹಾಗೂ ವಿದ್ಯಾರ್ಥಿಗಳದ್ದಾಗಿದೆ ಎಂದು ಹಿರಿಯ ಸಾಹಿತಿ ಡಾ. ಪಿ ಜಿ ಕೆಂಪಣ್ಣವರ ಅಭಿಮತ ವ್ಯಕ್ತಪಡಿಸಿದರು.

ನಿಪ್ಪಾಣಿ ತಾಲೂಕಿನ ಬೇಡಿಕೆ ಹಾಳ ಗ್ರಾಮದ ಬಿಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಟ್ಟ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ದ್ವಿತೀಯ ವರ್ಷಗಳ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು ಆಡಳಿತ ಮಂಡಳಿಯ ಅಧ್ಯಕ್ಷ ತಾತ್ಯಾಸಾಹೇಬ ಖೋತ ಅಧ್ಯಕ್ಷತೆ ವಹಿಸಿದ್ದರು.

ಪ್ರಾರಂಭದಲ್ಲಿ ವೇದಿಕೆಯಲ್ಲಿಯ ಗಣ್ಯರಿಂದ ದೀಪ ಪ್ರಜ್ವಲನೆ ಮಾಡಿ ಬಿಳ್ಕೊಡುವ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಪರವಾಗಿ ಕುಮಾರಿ ನಿಶಾ ಅರಗಾಲೆ, ವಾಣಿ ಲಟ್ಟೆ ಹಾಗೂ ಕಲ್ಯಾಣಿ ಮಧಾಳೆ ಮಾತನಾಡಿ*ಶೈಕ್ಷಣಿಕ ವರ್ಷದಲ್ಲಿ ಕಳೆದ ದಿನಗಳು ಕಳೆದ ದಿನಗಳು ಕಲಿಸಿದ ಗುರುಗಳು ಅನುಭವಿಸಿದೆ ಶಿಕ್ಷೆ ಪ್ರದರ್ಶಿಸಿದ ಪ್ರತಿಭೆ ಹೀಗೆ ಅನೇಕ ಪ್ರಸಂಗಗಳನ್ನು ಹಾಕಿದರು ಬೀಳ್ಕೊಡುವ ಸಮಾರಂಭದಲ್ಲಿ ನಿವೃತ್ತ ಉಪರಾಚಾರ್ಯ ಶಾಂತಿನಾಥ ಲಕಾರಿ ಸ್ಥಾನಿಕ ಆಡಳಿತ ಮಂಡಳಿಯ ಹಿರಿಯ ಸಂಚಾರಕರಾದ ಅಭಯ ಖೋತ , ಪ್ರದೀಪ್ ಪಾಟೀಲ ಮಹಾವೀರ ಹಿರುಕುಡೆ, ಬಾಹುಬಲಿ ಶಿರಗುಪ್ಪೆ, ವೃಷಭ ಖೋತ ಪ್ರಾಚಾರ್ಯ ಎಂ ಎಸ್ ಕಟ್ಟಿ, ಗೋಪಾಲ ಮಹಾಮುನಿ,ರಾಘವೇಂದ್ರ ಚಿತ್ರಗಾರ, ವಿನಾಯಕ ಮಾದಿಗ, ಡಿ ಎನ್ ದಾಭಾಡೆ ಸುನಿಲ್ ಸರ್ ಸೇರಿದಂತೆ ಬಹುಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಪ ಪ್ರಾಚಾರ್ಯ ಜೆ ಎ ಕಾಂಬಳೆ ಸ್ವಾಗತಿಸಿದರು.ಪ್ರತೀಕ್ಷಾ ಹುಜ್ಜಕ್ಕೆ ನಿರೂಪಿಸಿ ನೇಹಾ ಪಾಟೀಲ ವಂದಿಸಿದರು.

ವರದಿ  : ಮಹಾವೀರ ಚಿಂಚಣೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST