LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜಿಕೆ ಡಬ್ಲ್ಯೂ ಲೇಔಟ್ನಲ್ಲಿ ಶ್ರೀರಾಮ ನವಮಿ ಮತ್ತು ಬಸವ ಜಯಂತಿ ಆಚರಣೆ

Advertisement
ಬೆಂಗಳೂರು : ಬಸವಣ್ಣನವರು ಅನೇಕ ಜನಪರ, ಸಮಾಜ ಸುಧಾರಣೆ ಕ್ರಮ ಕೈಗೊಂಡು.'ಕಾಯಕವೇ ಕೈಲಾಸ' ವೆಂದು ಸಾರಿ, ಜನರಿಗೆ ದುಡಿದು ಬದುಕುವ ದಾರಿ ಮಾಡಿ ಕೊಟ್ಟಿದ್ದೇ ಬಸವಣ್ಣನವರು ಎಂದು ಶಾಸಕ ಎಸ್ ಮುನಿರಾಜು ಹೇಳಿದರು.

ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಮತ್ತು ಕುಟುಂಬಸ್ಥರ ನೇತೃತ್ವದಲ್ಲಿ ಜಿಕೆಡಬ್ಲ್ಯೂ ಲೇಔಟ್ ಸರ್ಕಲ್ ದಲ್ಲಿ ಶ್ರೀ ರಾಮ ನವಮಿ ಹಾಗೂ ಬಸವ ಜಯಂತಿ ಆಯೋಜಿಸಿದ್ದ ಸಂಬ್ರಮದಲ್ಲಿ ಶಾಸಕ ಎಸ್ ಮುನಿರಾಜು ಪಾಲ್ಗೊಂಡು ಬಸವಣ್ಣನವರ, ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಬಸವಣ್ಣನವರು ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆ, ಕಾಯಕ, ನಿಷ್ಠೆಯಿಂದ ನಂಬಿಕೆಯುಳ್ಳವರು ನಿಜವಾದ" ಶಿವಶರಣ" ಎಂದರು ಮತ್ತು ಇದೆ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಹುಟ್ಟು ಹಬ್ಬದ ನಿಮಿತ್ತ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿ ಮಾತಾಡಿದರು. ಬಿಜೆಪಿ ಮಾಜಿ ಅಧ್ಯಕ್ಷ ಆರ್ ಸಿ ಹರೀಶ್ ಅವರ ಸುಪುತ್ರ ಸಂತೋಷ ಸರ್ವರಿಗೂ ಸ್ವಾಗತಿಸಿದರು.

ಇದೆ ವೇಳೆ ಮಾಜಿ ಪಾಲಿಕೆ ಸದಸ್ಯ, ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹೆಚ್ ಎನ್ ಗಂಗಾಧರ್ ಮತ್ತು ಜನ ಪ್ರಿಯ ಸಮಾಜ ಸೇವಕ ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಬಿರಾದಾರ್ ಹರೀಶ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿದರು ನಂತರ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಕೆಡಬ್ಲ್ಯೂ ಲೇಔಟ್ ಪ್ರಭಾವಿ ಮುಖಂಡ ಮಲ್ಲೇಶ್ ಬಿ ಕೆ, ಬಿಜೆಪಿ ಮುಖಂಡರಾದ ದಿನೇಶ್, ಕಂಪ್ಯೂಟರ್ ವಿಜಯ ಕುಮಾರ್, ಮೋಹನ್, ಸುರೇಶ್ ದೊಡ್ಡಮನಿ, ಲೀಜನ್, ಲಕ್ಷ್ಮಣ್ಣ ಸೇರಿದಂತೆ ಆರ್ ಸಿ ಹರೀಶ್ ಅವರ ಅಪಾರ ಅಭಿಮಾನಿಗಳು ಮುಂತಾದವರು ಉಪಸ್ಥಿತರಿದ್ದರು.

ವರದಿ : ಅಯ್ಯಣ್ಣ ಮಾಸ್ಟರ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST