LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸರ್ಕಾರದ ಕಾರ್ಯಕ್ರಮಕ್ಕೆ ಬಹಿಷ್ಕಾರ

Advertisement
ದಾಂಡೇಲಿ : ಎಪ್ರೀಲ್ 14 ರಂದು ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ಹಳೇದಾಂಡೇಲಿ ಕಡೆಗಣಿಸಿದ್ದಕ್ಕೆ ನಾವು ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕುತ್ತಿದ್ದೇವೆ

ವಿವಿಧ ಸಂಘಟನೆಯ ಮುಖಾಂತರ ಮಾನ್ಯ ಡಿ ವೈ ಎಸ್ ಪಿ ಸಾಹೇಬ್ರ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಶಾಸಕರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಮನವಿ.  ಎಪ್ರೀಲ್ 14 ರಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ ಅಂಬೇಡ್ಕರರವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಬೇಕೆಂದು ತಾಲೂಕಾಡಳಿತ ವತಿಯಿಂದ ತಡವಾಗಿ ಮತ್ತು ಎಪ್ರೀಲ್ 05 ರಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾವ್ ರವರ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ಸಭೆ ಕರೆಯಲಾಗದೇ ತಡವಾಗಿ ಎಪ್ರೀಲ್ 07 ರಂದು ಪೂರ್ವ ಭಾವಿ ಸಭೆಯನ್ನು ಕರೆಯುತ್ತಾರೆ

ಸಭೆಯಲ್ಲಿ ಸರಿಯಾಗಿ ಯಾರಿಗೂ ಮಾಹಿತಿಯನ್ನು ನೀಡದೇ ಕೇಲ ಜನರನ್ನು ತೆಗೆದುಕೊಂಡು ಪೂರ್ವಭಾವಿ ಸಭೆಯನ್ನು ನಡೆಸಿರುತ್ತಾರೆ ಈ ಸಭೆಯಲ್ಲಿ ನಾನು ಹಳೇದಾಂಡೇಲಿಯಿಂದ ಸರ್ಕಾರದ ಕಾರ್ಯಕ್ರಮವನ್ನು ಈ ಜಯಂತಿ ಕಾರ್ಯಕ್ರಮದ ಮೂಲಕ ಆರಂಭಿಸಬೇಕೆಂದು ತಿಳಿಸಿದರೆ ಸಭೆಯಲ್ಲಿ ಕೆಲವರು ಭಿನ್ನಾಭಿಪ್ರಾಯವನ್ನು ವ್ಯಕ್ತ ಪಡಿಸಿದರು.

[video width="848" height="364" mp4="http://bharathvaibhav.com/wp-content/uploads/2026/04/WhatsApp-Video-2026-04-14-at-5.26.56-PM.mp4"][/video]

ಆದರೆ ನಾವು ಹಳೇದಾಂಡೇಲಿಯಿಂದ ಆರಂಭಿಸಬೇಕೆಂದು ಕಳೇದ 2011 ರಿಂದ 2015ರ ವರೆಗೆ ಅದ್ದೂರಿಯಾಗಿ ಸಾವರಾರು ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ನಗರ ಆಡಳಿತದಲ್ಲಿ ನಡೆಸಿಕೊಟ್ಟಿರುತ್ತಾರೆ. ಅದೇ ರೀತಿ ಈ ಬಾರಿಯೂ ಕೂಡ ಸರ್ಕಾರದ ಕಾರ್ಯಕ್ರಮವನ್ನು ಹಳೇ ದಾಂಡೇಲಿಯಿಂದ ಆರಂಭಿಸಬೇಕೆಂದು ಕೆಲ ಜನಪರ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಳೇದಾಂಡೇಲಿಯ ನಾಗರಿಕರಿಂದ ಮಾನ್ಯ ತಹಶೀಲ್ದಾರರವರಿಗೆ ಮನವಿಯನ್ನು ಮಾಡಿದ್ರು ಕೂಡ ಹಳೇದಾಂಡೇಲಿಯ ಜನರಿಗೆ ಮತ್ತು ಹಳೇದಾಂಡೇಲಿ ವಿಭಾಗಕ್ಕೆ ಕಡೆಗೆಣಿಸಿದ್ದಾರೆ. ಹಳೇದಾಂಡೇಲಿಯಿಂದ ಆರಂಭಿಸಬೇಕೆಂದು ಮೂಲ ಕಾರಣವೆನೆಂದರೆ ದಾಂಡೇಲಿ ಪ್ರಾರಂಭವಾಗಿದ್ದೇ ಹಳೇದಾಂಡೇಲಿಯಿಂದ ಹಳೇ ದಾಂಡೇಲಿಯಲ್ಲಿ ಮೊದಲು ನ್ಯಾಯಾಲಯ ವಿದ್ದು ಸಾರ್ವಜನಿಕ ಆಸ್ಪತ್ರೆ ಸಂಡೇ ಮಾರ್ಕೇಟ್ ರೈಲ್ವೆ ನಿಲ್ದಾಣ ಅಂಚೆ ಕಛೇರಿ ಸ್ವಾಮೀಲ್ ಮಿಲ್ ಪ್ಲಾವುಡ್ ಕಂಪನಿ ಲೈಯ್ ಬಾಯ್ ಕಂಪನಿ ಡಾಂಬರ ಕಂಪನಿ ಫಾರೇಸ್ಟ ತರಬೇತಿ ಕೇಂದ್ರ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ ರುದ್ರ ಭೂಮಿಗೆ ಹೋಗಲು ರಸ್ತೆ ಇಲ್ಲ ಹೀಗೆ ಹೇಳುತ್ತ ಹೋದರೇ ಹಳೇದಾಂಡೇಲಿಯ ಕೊಡುಗೆ ಹೆಚ್ಚಾಗಿದೆ. ಇವೆಲ್ಲವನ್ನು ತೆಗೆದು ಹಾಕಿ ಹಳೇದಾಂಡೇಲಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಇವೆಲ್ಲ ಸಂಗತಿಗಳು ನೋಡಿ ಸರ್ಕಾರದಿಂದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳಾಗಲಿ ಮತ್ತು ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವನ್ನು ಮಾಡುವ ಮೂಲಕ ಹಳೇದಾಂಡೇಲಿಗೆ ಜೀವ ತುಂಬುವ ಕೆಲಸವನ್ನು ಮಾಡಬೇಕೆಂದು ನಾವು ಸರ್ಕಾರಕ್ಕೆ ಮನವಿಯನ್ನು ಮಾಡಿದರೂ ಕೂಡ ನಮ್ಮ ಮನವಿಯನ್ನು ಸ್ಪಂದಿಸದೇ ನನಗೆ ಅವಮಾನ ಮಾಡುತ್ತಿದ್ದಾರೆ. ಆರು ವಾರ್ಡಗಳಿದ್ದು ಆರು ವಾರ್ಡಿನಲ್ಲಿ ಒಟ್ಟೂ ಜನಸಂಖ್ಯೆ ಹತ್ತರಿಂದ ಹದಿನೈದು ಸಾವಿರ ಮತದಾನವನ್ನು ಹೊಂದಿದ್ದು ಮತಕ್ಕೆ ಮಾತ್ರ ನಮ್ಮನ್ನು ಬಳಕೆ ಮಾಡುತ್ತಿದ್ದಾರೆ ಹಾಗೂ ನಗರ ಸಭೆಗೆ ಠೇವಣಿ ಮಾಡಿಕೊಳ್ಳಲು ಮಾತ್ರ ಹಳೇದಾಂಡೇಲಿ ಜನರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಇವೆಲ್ಲ ಕಾರಣದಿಂದ ಬೇಸತ್ತು ಮನಸಿಗೆ ನೋವು ಮಾಡಿಕೊಂಡು ಈ ದಿನದ ಕಾರ್ಯಕ್ರಮವನ್ನು ಭಹಿಷ್ಕಾರ ಹಾಕುವ ಮೂಲಕ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತಿದ್ದೇವೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ