LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜಂತರಮಂತರ್ ನಲ್ಲಿ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಬಿಜೆಪಿ ಪ್ರತಿಭಟಿಸಿ ಖಂಡನೆ 

Advertisement

ರಾಯಚೂರು: ದೆಹಲಿಯ ಜಂತರಮಂತರ್ ಮೈದಾನದಲ್ಲಿ ನಡೆಯುತ್ತಿರುವ ಕಾಕ್ರೋಚ್ ಪಾರ್ಟಿಯ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಪ್ರಧಾನಿ‌ಮೋದಿಯ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಘಟನೆ ಖಂಡಿಸಿ ಬಿಜೆಪಿ ಪಕ್ಷದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎನ್ ಶಂಕ್ರಪ್ಪ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಆನಂತರ ಪುನಃ ಪರೀಕ್ಷೆ ನಡೆಸಿದ್ದು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಸುಮ್ಮನಾಗಿದ್ದಾರೆ ಆದರೆ ದೇಶದಲ್ಲಿ ಅರಾಜಕತೆ ಸೃಷ್ಠಿಸುವ ಸಲುವಾಗಿ ಕಾಕ್ರೋಚ್ ಪಾರ್ಟಿಯ ಹೆಸರಿನಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಆಗದೇ ನಿರಾಶರಾಗಿ ಸರ್ಕಾರವನ್ನು ಪತನಗೊಳಿಸಲು ಯುವಕರನ್ನು ಎತ್ತಿಕಟ್ಟಿ ಹೋರಾಟ ಮಾಡುತ್ತಿದ್ದಾರೆ ರಾಜಕೀಯ ಲಾಭ ಪಡೆಯಲು ಇತರೆ ವಿರೋಧ ಪಕ್ಷಗಳು ಕೈ ಜೋಡಿಸಿವೆ. ಕಾಕ್ರೋಚ್ ಪಾರ್ಟಿಯ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಅವರಿಗೆ ವಿದೇಶದಿಂದ ಹಣ ಬರುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ ವಿ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್,  ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೇಕಿಹಾಳ್,  ಕರಿಯಪ್ಪ,ಜಂಬಣ್ಣ ನೀಲಗಲ್, ರವೀಂದ್ರ ಜಾಲ್ದಾರ್, ನಾಗರಾಜ್ ಭಲ್ಕಿ, ರಾಜಕುಮಾರ್, ರಾಘವೇಂದ್ರ ಹುಟಕೂರ್, ವಿಜಯ್ ಕುಮರ್ ಸಜ್ಜನ್, ಅಂಬ್ರೆಷ್ ಪಾಟೀಲ್, ಕೆ ಆರ್ ಪಾಟೀಲ್, ಶಂಕರ್ ರೆಡ್ಡಿ, ಅಂಜಿನಯ್ಯ ಕಡಗೋಲ್, ರೂಪ್ ಶ್ರೀನಿವಾಸ್ ನಾಯಕ್, ಮೌನೇಶ್ ಇತರರು ಉಪಸ್ಥಿತರಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST