LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಒಳಚಂಡಿ ಕಾಮಗಾರಿಗೆ ಭೂಮಿ ಪೂಜೆ : ಶಾಸಕ ಹಂಪನಗೌಡ ಬಾದರ್ಲಿ

Advertisement

ಸಿಂಧನೂರು : ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಲಿಮಿಟೆಡ್ ಬೆಂಗಳೂರು ರವರ ವತಿಯಿಂದ ನಗರದಲ್ಲಿ ಜಲಶುದ್ಧಿ ಮಿಷನ್ ಎನ್‌ಜಿಟಿ, ಪರಿಸರ ಪರಿಹಾರ  ನಿಧಿಯಡಿಯಲ್ಲಿ ಡಿಬಿಓಟಿ, ಮಾದರಿಯಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ/ ಉನ್ನತೀಕರಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಹಂಪನಗೌಡ ಬಾದರ್ಲಿ  ವಾರ್ಡ್ ನಂಬರ್ 28 ಸುಕಲಪೇಟೆ ಮತ್ತು ವಾರ್ಡ್ ನಂಬರ್ 1, 2 ರಲ್ಲಿ ಸಭೆ ಸೇರಿ ಮಾತನಾಡಿ ಅವರು ಈ ಒಳಚರಂಡಿ ಕಾಮಗಾರಿ ಬರುವ 11 ತಿಂಗಳಲ್ಲಿ ಮುಗಿಸಲಾಗುತ್ತದೆ ನಗರದ ಜನತೆಗೆ ಶುದ್ಧವಾದ ವಾತಾವರಣ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ನಗರದ 31 ವಾರ್ಡ್ಗಳಲ್ಲಿ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇನೆ ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ತಾಲೂಕಿನ 
ತುರುವಿಹಾಳ ಪಟ್ಟಣದ ವ್ಯಾಪ್ತಿಯಲ್ಲಿ 110 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿದ್ದು ನಗರಕ್ಕೆ ಶುದ್ಧವಾದ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ.

 ನಗರ ಮತ್ತು ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಗುರಿ ಎಂದು ಭರವಸೆ ನೀಡಿದರು  ಈ ಸಂದರ್ಭದಲ್ಲಿ: ನಗರ ಸಭೆ ಪೌರಾಯುಕ್ತ ಪಾಂಡುರಂಗ ಇಟಗಿ. ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಅರುಣ್ ಕುಮಾರ ವೈ. ಸೂಡ ಸದಸ್ಯ ಖಾಜಿ ಮಲ್ಲಿಕ್. ಪ್ರಭುರಾಜ್. ದುರ್ಗಪ್ಪ ಕಟಾಲಿ ಅಶೋಕ್ ಉಮಾಲೂಟಿ. ಸೋಮನಾಥ ಸೂಲಂಗಿ. ಮುರ್ತುಜ್. ದುರುಗೇಶ್ ಬಾಲಿ. ಛತ್ರಪ್ಪ ಸೇರಿದಂತೆ ವಾರ್ಡಿನ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.


ವರದಿ : ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST