LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನೂತನ ಬಿಇಓ ಆಗಿ ಬಿ ಉಮಾಪತಿ ಅಧಿಕಾರ ಸ್ವೀಕಾರ 

Advertisement

ವಿಜಯನಗರ :ಹೊಸಪೇಟೆ ತಾಲ್ಲೂಕಿನ ಶೈಕ್ಷಣಿಕ ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ ಉಮಾಪತಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಬಳಿಕ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆ, ವಲ್ಲಭಪುರ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮುಖ್ಯಗುರುಗಳಾಗಿ ಶೈಕ್ಷಣಿಕ ವಲಯವು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.ಇದೇ ನಿಟ್ಟಿನಲ್ಲಿ ಮುಂದಿನ ವರ್ಷ ನಡೆಯಲಿರುವ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ವಿದ್ಯಾರ್ಥಿಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ರಾಜ್ಯದಲ್ಲಿಯೇ ಉತ್ತಮ ಸ್ಥಾನ ಪಡೆಯಲು ಶ್ರಮ ವಹಿಸುತ್ತೇನೆ ಶೈಕ್ಷಣಿಕ ವಲಯದ ಎಲ್ಲ ಶಿಕ್ಷಕರು ನನಗೆ ತಮ್ಮ ಸಹಕಾರ ನೀಡಿ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.ಇದಕ್ಕೂ ಮುಂಚೆ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶೇಖರ್ ಹೊರಪೇಟೆ ಅವರನ್ನು ಕೊಪ್ಪಳ ಬಿಇಓ ಆಗಿ ವರ್ಗಾವಣೆಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿತ್ತು.ಇನ್ನೂ ನೂತನ ಬಿಇಓ ಅವರನ್ನು, ಕ್ಷೇತ್ರ ಶಿಕ್ಷಣಾಧಿ ಕಾರ್ಯಾಲಯ  ಅಧಿಕಾರಿಗಳು, ಸಿಬ್ಬಂದಿಗಳು ತಾಲೂಕಿನ ಶಿಕ್ಷಕ ವೃಂದದವರು ಸ್ವಾಗತಕೋರಿ ಸನ್ಮಾನಿಸಿದರು.
news_1778841944_0_311.webp

 

ವರದಿ :ಪಿ. ಶ್ರೀನಿವಾಸ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST