LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಏಷ್ಯಾದಲ್ಲಿ 2ನೇ ಅತಿ ದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ

Advertisement
ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ, ಬರೋಬ್ಬರಿ 7,000 ಉದ್ಯೋಗಿಗಳ ಕೆಲಸ ಮಾಡಲು ಸ್ಥಳವಕಾಶವಿರುವ ಅತೀ ದೊಡ್ಡ ಕಚೇರಿ ಇದಾಗಿದೆ. 11 ಮಹಡಿ, 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ.

ಏಷ್ಯಾದಲ್ಲಿ ಎರಡನೇ ಅತೀ ದೊಡ್ಡ ಅಮೇಜಾನ್ ಕಚೇರಿ ಬೆಂಗಳೂರಿನಲ್ಲಿ ಕಾರ್ಯಾರಂಭಗೊಡಿದೆ.12 ಮಹಡಿಗಳ 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಈ ಕ್ಯಾಂಪಸ್‌ನಲ್ಲಿ ಬರೋಬ್ಬರಿ 7000 ಉದ್ಯೋಗಿಗಳು ಏಕಾಕಾಲದಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಇ ಕಾಮರ್ಸ್, ಪೇಮೆಂಟ್, ಮಾರ್ಕೆಟಿಂಗ್, ಟೆಕ್ನಾಲಜಿ, ಸರ್ವೀಸ್, ಸೇಲ್ಸ್ ಸೇರಿದಂತೆ ಎಲ್ಲಾ ವಿಭಾಗ ಒಂದೇ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲಿದೆ.

ಐದು ಏಕರೆ ಪ್ರದೇಶದಲ್ಲಿ ಅಮೇಜಾನ್ ಕಚೇರಿ ತಲೆ ಎತ್ತಿ ನಿಂತಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 15 ಕಿಲೋಮೀಟರ್ ದೂರದಲ್ಲಿ ಈ ಕಾರ್ಪೋರೇಟ್ ಕ್ಯಾಂಪಸ್ ಇಂದು ಉದ್ಘಾಟನೆಗೊಂಡಿದೆ. ಸಚಿವ ಎಂಬಿ ಪಾಟೀಲ್ ಅಮೇಜಾನ್ ನೂತನ ಕಚೇರಿ ಉದ್ಘಾಟನೆ ಮಾಡಿದ್ದಾರೆ.

ಅಮೇಜಾನ್ ಈಗಾಗಲೇ ಭಾರದಲ್ಲಿ 40 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. 2030ರ ವೇಳೆಗೆ ಮತ್ತೆ 35 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ. ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡುತ್ತಿರುವ ಅಮೇಜಾನ್ ಇದೀಗ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಏಷ್ಯಾದಲ್ಲಿ ಅಮೇಜಾನ್ ಕಂಪನಿಯ ಎರಡು ಅತೀ ದೊಡ್ಡ ಕಚೇರಿಗಳು ಭಾರತದಲ್ಲೇ ಇದೇ. ಏಷ್ಯಾದ ಅತೀ ದೊಡ್ಡ ಅಮೇಜಾನ್ ಆಫೀಸ್ ಇರುವುದು ಹೈದರಾಬಾದ್‌ನಲ್ಲಿ. ಇದೀಗ 2ನೇ ಅತೀ ದೊಡ್ಡ ಆಫೀಸ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಈ ಮೂಲಕ ಎರಡು ಐಟಿ ಸಿಟಿಗಳಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲೇ ಅಮೇಜಾನ್ ಹೂಡಿಕೆ ಮಾಡಿದೆ.

ಕರ್ನಾಟಕದಲ್ಲಿ ಅತೀ ವೇಗವಾಗಿ ಅಮೇಜಾನ್ ಕಂಪನಿ ಬೆಳೆಯುತ್ತಿದೆ. ಕರ್ನಾಟಕ ಮೂಲೆ ಮೂಲೆಯಲ್ಲೂ ಅಮೇಜಾನ್ ಡೆಲಿವರಿ ನೀಡುತ್ತಿದೆ. ತ್ವರಿತ ಡೆಲಿವರಿ ಸೇರಿದಂತೆ ಅಮೇಜಾನ್ ಕಂಪನಿ ಅತೀ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ