LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ

Advertisement

ಕಲಘಟಗಿ : ಸಮಗ್ರ ಮಾನವ ಕುಲ ನಾಚುವಂತಹ ಕೆಲಸವೆಂದರೆ ಮಾನವ ಕಳ್ಳ ಸಾಗಾಣಿಕೆ. ಯಾವುದೆ ದೌರ್ಬಲ್ಯಕ್ಕಾಗಿ ಇಂತಹ ಕೃತ್ಯವನ್ನು ಯಾರೂ ಎಸಗಬಾರದು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ರವೀಂದ್ರ ಹೊನೂಲೆ ಹೇಳಿದರು.

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಕಂಡುಬಂದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅದನ್ನು ತಡೆಯಬಹುದು ಎಂದರು.

ದಿವಾಣಿ ನ್ಯಾಯಾಧೀಶರಾದ ಸಂಜೀವ ಕುಮಾರ ಮಾತನಾಡಿದರು. ಹಿರಿಯ ನ್ಯಾಯವಾದಿ ಹಾಗೂ ಮಾನವ ಕಳ್ಳಸಾಗಾಣಿಕಾ ವಿರೋಧಿ ಸಮಿತಿ  ಅಧ್ಯಕ್ಷ ಹೊನ್ನಪ್ಪ ಬಡಿಗೇರ ಮಾತನಾಡಿದರು.ಸಿ.ಪಿ.ಐ ಶ್ರೀಶೈಲ ಕೌಜಲಗಿ ಅವರು ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜನರು ಎಚ್ಚತ್ತು ಕೊಳ್ಳಬೇಕು ಎಂದು ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST