LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಎಮ್ಮೆಯೊಂದಿಗೆ  ವಿನೂತನ ಪ್ರತಿಭಟನೆ

Advertisement

ಹುಬ್ಬಳ್ಳಿ ;ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಕನ್ನಡ ಹೋರಾಟಗರ ಸಮಿತಿಯ ಸದಸ್ಯರು ಇಲ್ಲಿನ ಪಾಲಿಕೆಯ ಆವರಣದಲ್ಲಿಂದು ಎಮ್ಮೆ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಕ್ಕಾಗಿ ಮತದಾರರು ಪಾಲಿಕೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಆದರೆ ಇಂದು ಅದೇ ಮತದಾರರು ಪ್ರತಿಭಟನೆ ಮೂಲಕವೇ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಂತಕ್ಕೆ ಬಂದಿದೆ ಎಂದು ಬಾಯಿಗೆ ಕಪ್ಪು ಬಟ್ಟೆಗಳನ್ನು ಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡಿದರು.
news_1780043454_0_674.webp

 

ಈ ವೇಳೆ ಪಾಲಿಕೆ ಆವರಣ ಮತ್ತು ಹುಬ್ಬಳ್ಳಿ ನಗರದಲ್ಲಿ ಅವಶ್ಯ ಇದ್ದ ಕಡೆ ಸಾರ್ವಜನಿಕ ಶೌಚಾಲಯ ಕಟ್ಟಡ ಕಟ್ಟುವುದು ಯಾವಾಗ? ಸಾಂಸ್ಕೃತಿಕ ಭವನ ಹಾಗೂ ರಂಗಮAದಿರಗಳು ನವೀಕರಣ ಮಾಡುವುದು? ಸರ್ ಸಿದ್ದಪ್ಪ ಕಂಬಳಿ ಅವರ ಪ್ರತಿಮೆ ಸ್ಥಳಾಂತರ ಮಾಡುವುದು ಅದರ ಜೊತೆಗೆ ಇನ್ನಿತರ ಸಾಧಕರನ್ನು ಪ್ರತಿಷ್ಠಾಪನೆ ಮಾಡುವುದು ಯಾವಾಗ? ಹುಬ್ಬಳ್ಳಿ ಮಹಾನಗರದ ಪ್ರಯಾಣಕರಿಗೆ ಬಸ್ ನಿಲ್ದಾಣ ಎಲ್ಲಿವೇ? ಪ್ಲೈಓವರ್ ಕಾಮಗಾರಿ ಯಾವಾಗ ಮುಕ್ತಾಯ? ಪಾಲಿಕೆಯ ಮುಖ್ಯ ಕಚೇರಿ ಆವರಣದಲ್ಲಿ ಕೂಡಲು ಮತ್ತು ಕುಡಿಯುವ ನೀರು ಎಲ್ಲಿದೆ? ಹುಬ್ಬಳ್ಳಿ ನಗರದ ಪಾದಾಚಾರಿ ರಸ್ತೆ ಒತ್ತುವರಿ ತೆರವು ಯಾವಾಗ? ಉದ್ಯಾನವನಗಳ ಸೌಂದರ್ಯಕರಣ ಯಾವಾಗ? ಮೊದಲಿನಂತೆ ಹಸಿರು ಹೂಬಳ್ಳಿ ನಗರ ಮಾಡುವುದು ಯಾವಾಗ? ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿ ಮುಕ್ತ ವಾರ್ಡಗಳು ಯಾವಾಗ ಎಂದು ಪ್ರಶ್ನೆಗಳ ಮನವಿಯನ್ನು ಪಾಲಿಕೆಯ ಮೇಯರ್ ಅವರಿಗೆ ಸಲ್ಲಿಸಿದರು.

ಸಮಿತಿಯ ಸದಸ್ಯರಾದ ವಿರೇಶ ಜಿಗಳೂರ, ಈರಪ್ಪ ಎಮ್ಮಿ, ರಮೇಶ ಹಳ್ಳಿಕೇರಿ, ಮೌನೇಶ ಅಂಬಿಗೇರ, ಖಾಜಾಸಾಬ ಅಸ್ಲಾಂ, ಪ್ರಕಾಶ ನಾಯ್ಕ, ಸಂಜೀವ ದುಮಕನಾಳ, ಶೇಖರಯ್ಯ ಮಠಪತಿ ಸೇರಿದಂತೆ ಅನೇಕರು ಮಲ್ಕೊಂಡಿದ್ದರು
 

ವರದಿ:ಸುಧೀರ್ ಕುಲಕರ್ಣಿ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST