LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಫೆ.22 ರಿಂದ ಐಗಳಿ ಶ್ರೀ ಅಪ್ಪಯ್ಯ ಸ್ವಾಮಿಗಳ ಜಾತ್ರೆ

Advertisement
ಐಗಳಿ : ಗ್ರಾಮದ ಆರಾಧ್ಯ ದೇವರಾದ ಶ್ರೀ ಅಪ್ಪಯ್ಯ ಸ್ವಾಮಿಗಳ ಜಾತ್ರಾ ಮಹೋತ್ಸವವು ಇದೇ ಫೆಬ್ರುವರಿ ದಿ ೨೨ ರಿಂದ ೨೬ ರವರೆಗೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ರವಿವಾರ ದಿ ೨೨ ರಂದು ವಿಶೇಷ ಪೂಜಾ ಕಾರ್ಯಕ್ರಮ, ರಾತ್ರಿ ವಿವಿಧ ಭಜನಾ ಮಂಡಳಿಗಳಿಂದ ಭಜನೆಗಳು ನಡೆಯುವವು.
ಸೋಮವಾರ ದಿ ೨೩ ರಂದು ಶ್ರೀಗಳ ಗದ್ದುಗೆಗೆ ಅರ್ಚಕರಾದ ಸಾಬಣ್ಣ ಬ ಹಾಲಳ್ಳಿ ಮತ್ತು ಬನಪ್ಪ ಬ ಹಾಲಳ್ಳಿ ಇವರಿಂದ ರುದ್ರಾಭಿಷೇಕ ಮಹಾಊಜೆ, ನಂತರ ಮಹಾನೈವೇಧ್ಯ ಜರುಗಲಿದೆ. ಸಾಯಂಕಾಲ ೫ ಘಂಟೆಗೆ ಶ್ರೀಗಳಿಂದ ಪ್ರವಚನ ಹಾಗೂ ಶರಣ ಸಂಸ್ಕೃತಿ ಉತ್ಸವ ಜರುಗಲಿದೆ. ಸಾಯಂಕಾಲ ೭ ಗಂಟೆಗೆ ಹಾಸ್ಯ ಕಲಾವಿದರಿಂದ ಸಂಗೀತ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ ಜರುಗುವದು. ರಾತ್ರಿ ೯.೩೦ ಕ್ಕೆ ಜಮಖಂಡಿ ವೆಂಕಟೇಶ್ವರ ನಾಟ್ಯ ಸಂಘ ಇವರಿಂದ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಜರುಗುವದು.

ಮಂಗಳವಾರ ದಿ ೨೪ ರಂದು ಮುಂಜಾನೆ ರುದ್ರಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಾಯಂಕಾಲ ೫ ಗಂಟೆಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ. ರಾತ್ರಿ ೯ ಕ್ಕೆ ಮುತ್ತೂರ ಗ್ರಾಮದವರಿಂದ ಶ್ರೀ ಸತ್ಯ ಹರಿಶ್ಚಂದ್ರ ಬೈಲಾಟ ಜರುಗಲಿದೆ.

ಬುಧವಾರ ದಿ ೨೫ ರಂದು ಮುಂ ೯ ಕ್ಕೆ ಕಿರಣಗಿ ಪ್ರಭಾವತಿ ಭಜನಾ ಮಂಡಳಿ ಇವರಿಂದ ಹಾಗೂ ಮಾಲ ಐನಾಪೂರ ಶೋಭಾ ಭಜನಾ ಮಂಡಳಿ ಇವರಿಂದ ಭಜನಾ ದಗಳು ಜರುಗುವವು. ರಾತ್ರಿ ೯.೩೦ ಕ್ಕೆ ಐಗಳಿ ಶ್ರೀ ಅಪ್ಪಯ್ಯ ಸ್ವಾಮಿ ನಾಟ್ಯ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕಲಗುಂಡಿ ಶ್ರೀ ಅಂಜನಿಪುತ್ರ ನಾಟ್ಯ ಸಂಘ ಅರ್ಪಿಸುವ ತಾಯಿ ಇಲ್ಲದ ತವರು ಸಾಮಾಜಿಕ ನಾಟಕ ಜರುಗುವದು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST