LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆಕಸ್ಮಿಕ ಬೆಂಕಿ ಅನಾಹುತ : ಹುಲ್ಲಿನ ಬಣವೆ ಭಸ್ಮ

Advertisement
ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿ ಮುಗಳೂರು ಗ್ರಾಮದ ತೋಟವೊಂದರಲ್ಲಿ ಶೇಖರಿಸಿಟ್ಟಿದ್ದ ಹುಲ್ಲಿನ‌ ಬಣವೆಗೆ ಆಕಸ್ಮಿಕ ಬೆಂಕಿ‌ ತಗುಲಿದ ಪರಿಣಾಮ ಬಣವೆ ಭಸ್ಮಗೊಂಡು ಸುಮಾರು 80 ಸಾವಿರ ರೂ ನಷ್ಟವಾಗಿದೆ.

ಮುಗಳೂರು ಗ್ರಾಮದ ವಿಜಯಮ್ಮ ಬಿನ್ ಆರ್.ರಂಗಯ್ಯ ಅವರ ತೋಟದಲ್ಲಿ (ಸರ್ವೆ ನಂಬರ್ 250/1) ಶೇಖರಿಸಿಟ್ಟಿದ್ದ ಹುಲ್ಲಿನ ಬಣವೆಗೆ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ.

ತೋಟಕ್ಕೆ ತುಂಬಾ ಹತ್ತಿರವಿರುವ ವಿದ್ಯುತ್ ಪರಿವರ್ತಕದಲ್ಲಿ ಉಂಟಾದ‌ ಕಿಡಿಯು ಹುಲ್ಲಿನ‌ ಬಣವೆಗೆ ಬಿದ್ದು ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.‌ ಸುಮಾರು 350 ಹೊರೆ ಹುಲ್ಲಿನ ಬಣವೆ ಇದ್ದು 75 ರಿಂದ 80 ಸಾವಿರ ರೂ‌ ನಷ್ಟ ಸಂಭವಿಸಿದೆ.

ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿರುವುದನ್ನು ಕಂಡ ಅಕ್ಕಪಕ್ಕದ ತೋಟದಲ್ಲಿದ್ದ ಗ್ರಾಮಸ್ಥರು ತಕ್ಷಣ ಬೆಂಕಿ‌ ನಂದಿಸಲು ಪ್ರಯತ್ನಿಸಿದ್ದಲ್ಲದೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಶೀಘ್ರ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ‌ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಹುಲ್ಲಿನ ಬಣವೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಜಾನುವಾರುಗಳಿಗೆಂದು ಶೇಖರಿಸಿಟ್ಟಿದ್ದ ಮೇವು ನಾಶವಾಗಿದ್ದುದರಿಂದ ವಿಜಯಮ್ಮ ಕುಟುಂಬ ಕಂಗಾಲಾಗಿದೆ.

ಕೂಡಲೇ ತಾಲೂಕು ಆಡಳಿತ ಪರಿಹಾರ ಒದಗಿಸಿ ನೆರವಾಗಬೇಕೆಂದು ವಿಜಯಮ್ಮ ಮನವಿ ಮಾಡಿದ್ದಾರೆ.

ವರದಿ : ಗಿರೀಶ್ ಕೆ ಭಟ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ