LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಫೈರಿಂಗ್ ತರಬೇತಿ ವೇಳೆ ಹಾವೇರಿ ಮೂಲದ ಯೋಧ ದುರ್ಮರಣ 

Advertisement

ಹಾವೇರಿ: ದೇಶಸೇವೆಯಲ್ಲಿ ತೊಡಗಿದ್ದ ನೌಕಾಪಡೆ ಯೋಧರೊಬ್ಬರು ಕರ್ತವ್ಯದ ವೇಳೆ ವೀರಮರಣ ಹೊಂದಿರುವ ದುಃಖದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

 ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ನಿವಾಸಿ ಯಶೋಧರ ವಡ್ಡರ್ (29) ಅವರು ಫೈರಿಂಗ್ ತರಬೇತಿ ವೇಳೆ ಹುತಾತ್ಮರಾಗಿದ್ದಾರೆ.

ಮೃತ ಯಶೋಧರ ವಡ್ಡರ್ ಕಳೆದ 10 ವರ್ಷಗಳಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2016ರಲ್ಲಿ ನೌಕಾದಳಕ್ಕೆ ಸೇರ್ಪಡೆಯಾಗಿದ್ದರು.

ಕರ್ತವ್ಯದ ಭಾಗವಾಗಿ ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದ್ದ ಫೈರಿಂಗ್ ತರಬೇತಿ ವೇಳೆ ಸಂಭವಿಸಿದ ಘಟನೆಯಲ್ಲಿ ಅವರು ವೀರಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮ ಉಪ್ಪುಣಸಿಗೆ ತರಲಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧನ ನಿಧನಕ್ಕೆ ಗ್ರಾಮಸ್ಥರು, ಬಂಧು-ಬಳಗ ಹಾಗೂ ವಿವಿಧ ಸಂಘಟನೆಗಳು ತೀವ್ರ ಸಂತಾಪ ಸೂಚಿಸಿವೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST