LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದಾನಾ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ಪೆನಾಲ್ ಗೆ ಭರ್ಜರಿ ಗೆಲುವು

ಪ್ರಾಥಮಿಕ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆ

Advertisement

ಭಾಲ್ಕಿ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಶಿಕ್ಷಕ ಬಸವರಾಜ್ ದಾನಾ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ಪೆನಾಲ್ ನ ನಿರ್ದೇಶಕರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಂತೋಷ್ ವಾಡೆ ನೇತೃತ್ವದ ಸ್ವಾಮಿ ವಿವೇಕಾನಂದ ಪೇನಲ್ ಮತ್ತು ಬಸವರಾಜ ದಾನಾ ನೇತೃತ್ವದ ಸ್ವಾಭಿಮಾನಿ ಪೇನಲ್ ಗಳ ಮಧ್ಯ ಭಾರಿ ಪೈಪೋಟಿ ನಡೆದಿದೆ. ಒಟ್ಟು 13 ನಿರ್ದೇಶಕರನ್ನು ಆಯ್ಕೆ ಮಾಡಬೇಕಿತ್ತು, ಅವರಲ್ಲಿ ಎರಡು ಪೇನಲ್ ಅಭ್ಯರ್ಥಿಗಳು ಹಾಗೂ ಓರ್ವ ಸ್ವತಂತ್ರ ಅಭರ್ಥಿ ಸೇರಿ 27 ಜನರು ಕಣದಲ್ಲಿದ್ದರು. ಸಾಮಾನ್ಯ ಕ್ಷೇತ್ರಕ್ಕೆ 9 ನಿರ್ದೇಶಕರು, ಮಹಿಳಾ ಕ್ಷೇತ್ರಕ್ಕೆ 4 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದೆ. ಇವರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ವಾಭಿಮಾನಿ ಶಿಕ್ಷಕರ ಪೆನಾಲ್ ನ ಬಸವರಾಜ ದಾನಾ, ದತ್ತು ಮುದಾಳೆ , ಸತ್ಯವಾನ ಕಾಂಬಳೆ, ಸುಧಾಕರ್ ಗಾಯಕವಾಡ, ರಾಮರಾವ್ ಬಾನಾ, ಗಣಪತಿ ಭಕ್ತ 6 ನಿರ್ದೇಶಕರು ಹಾಗು ಸ್ವಾಮಿ ವಿವೇಕಾನಂದ ಪೇನಲ್ ನ ಸಂತೋಷಕುಮಾರ ವಾಡೆ, ಚಂದ್ರಕಾಂತ ತಳವಾಡೆ, ಸೂರ್ಯಕಾಂತ್ ಸುಂಟೆ 3 ನಿರ್ದೇಶಕರು ವಿಜಯ ಸಾಧಿಸಿದರೆ, ಮಹಿಳಾ ಕ್ಷೇತ್ರದಿಂದ ಸ್ವಾಭಿಮಾನಿ ಪೇನಲ್ ನ ನಿರ್ಮಲ ಚಲವಾ, ಅನಿತಾ ಎಸ್. ಮುದಾಳೆ 2 ನಿರ್ದೇಶಕರು ಹಾಗು ಸ್ವಾಮಿ ವಿವೇಕಾನಂದ ಪೇನಲ್ ನ ರತ್ನಮ್ಮ ಹಾಲಕುಡೆ, ಅನ್ನಪೂರ್ಣ ಮೇತ್ರೆ 2 ನಿರ್ದೇಶಕರು ವಿಜಯ ಸಾಧಿಸಿದ್ದಾರೆ, ಹೀಗಾಗಿ ಒಟ್ಟು 13 ನಿರ್ದೇಶಕರಿರುವ ಸಂಘದಲ್ಲಿ ಸ್ವಾಭಿಮಾನಿ ಪೇನಲ್ ನ 8 ನಿರ್ದೇಶಕರು ಹಾಗು ಸ್ವಾಮಿ ವಿವೇಕಾನಂದ ಪೇನಲ್ ನ 5 ನಿರ್ದೇಶಕರು ವಿಜಯ ಸಾಧಿಸಿದ್ದಾರೆ. ಹೀಗಾಗಿ ಸ್ವಾಭಿಮಾನಿ ಶಿಕ್ಷಕರ ಪೆನಾಲ್ ಗೆ ಸ್ಪಷ್ಟ ಬಹುಮತ ದೊರೆತಿದ್ದು ಮುಂದಿನ ಅಧ್ಯಕ್ಷರಾಗಿ ಬಸವರಾಜ್ ದಾನಾ ಚುಕ್ಕಾಣಿ ಹಿಡಿಯುವಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಎಲ್ಲ ಶಿಕ್ಷಕ ಬಾಂಧವರ ಅಭಿಮತ ವಾಗಿದೆ. ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸ್ವಾಭಿಮಾನಿ ಶಿಕ್ಷಕರ ಪೆನಾಲ್ ಅಭ್ಯರ್ಥಿಗಳು ಚನ್ನ ಬಸವ ಆಶ್ರಮ, ಬೌಧ ಮಂದಿರ, ಭಾಲ್ಕೇಶ್ವರ ಮಂದಿರಗಳಿಗೆ ತೆರಳಿ ದರ್ಶನ ಪಡೆದು ವಿಜಯೋತ್ಸವ ಆಚರಿಸಿದರು. ಈ ಸಂಧರ್ಭದಲ್ಲಿ ಗೋವಿಂದರಾವ್ ಬಿರಾದಾರ, ದತ್ತಾತ್ರಿ ಕಾಟ್ಕರ್, ಸಂದೀಪ್ ಉಮಾಜೀ, ಕಾಶಿನಾಥ ಚಲವ, ಬಾಲಾಜಿ ಬೈರಾಗಿ ಸೇರಿದಂತೆ ಹಲವು ಪ್ರಮುಖರು ಇದ್ದರು.

ವರದಿ : ಸಂತೋಷ ಬಿಜಿ ಪಾಟೀಲ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST