LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Feature Article

ಕುಟುಂಬ ರಾಜಕಾರಣದಲ್ಲಿ ದೇಶದಲ್ಲಿಯೇ ಕರ್ನಾಟಕಕ್ಕೆ 4ನೇ ಸ್ಥಾನ : ಎಡಿಆರ್ ವರದಿ 

Advertisement
ನವದೆಹಲಿ: ಕುಟುಂಬ ರಾಜಕಾರಣ ಭಾರತದಲ್ಲಿರುವ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಇದರಿಂದ ಹೊರತಾಗಿಲ್ಲ. ಬೂದುಗಾಜು ಹಾಕಿ ಹುಡುಕಿದ್ರೆ ಕುಟುಂಬ ರಾಜಕಾರಣದಿಂದ ಹೊರನಿಂತ ಪಕ್ಷಗಳು ಅಲ್ಲೊಂದು ಇಲ್ಲೊಂದು ಉದಾಹರಣೆಗಳು ಸಿಗಬುದೇನೋ..ಹೀಗೆ ಭಾರತದಲ್ಲಿ ಕುಟುಂಬ ರಾಜಕಾರಣ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನ ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಈ ಬಗ್ಗೆ ವರದಿ ಪ್ರಕಟಿಸಿದ್ದು, ಇದರ ಪ್ರಕಾರ ಭಾರತದಲ್ಲಿ 21% ಸಂಸದರು, ಶಾಸಕರು ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದವರು ಎನ್ನಲಾಗಿದೆ. ದೇಶಾದ್ಯಂತ ಸಂಸದರು, ಶಾಸಕರು, ಎಂಎಲ್‌ಸಿಗಳ ಪೈಕಿ ಪ್ರತಿ ಐದರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರಿದ್ದಾರೆ ಎಂದು ವರದಿ ಹೇಳಿದೆ.

ಇನ್ನು ನಮ್ಮ ರಾಜ್ಯ ಕೂಡ ಈ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ.ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕುಟುಂಬ ರಾಜಕಾರಣ ಬಲವಾಗಿ ಬೇರೂರಿದೆ ಎಂದು ಈ ವರದಿ ಹೇಳುತ್ತದೆ.

ಕರ್ನಾಟಕ ಈ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಕರ್ನಾಟಕದಲ್ಲಿ ಒಟ್ಟು 94 ಜನಪ್ರದಿನಿಧಿಗಳು ಕುಟುಂಬ ರಾಜಕಾರಣದ ಫಲವಾಗಿ ಅಧಿಕಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇತರೆ ರಾಜ್ಯಗಳಲ್ಲಿ ಗಮನಿಸಿದಾಗ ಮಹಾರಾಷ್ಟ್ರದಲ್ಲಿ 129, ಉತ್ತರ ಪ್ರದೇಶದಲ್ಲಿ 141, ಬಿಹಾರದಲ್ಲಿ 96 ಜನ ಕುಟುಂಬ ರಾಜಕಾರಣ ಹಿನ್ನಲೆ ಹೊಂದಿದವರು ಇದ್ದಾರೆ. ಆದ್ರೆ ಅಸ್ಸಾಂ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿ ಕೇವಲ 9 ಮಂದಿ ಎಂದು ವರದಿಯಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ