LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Feature Article

ಕಠಿಣ ಯೋಗಾಸನಗಳನ್ನು ಮಾಡಿದ 9 ತಿಂಗಳ ಗರ್ಭಿಣಿ 

Advertisement

ಬೆಂಗಳೂರು:9 ತಿಂಗಳ (39 ವಾರಗಳ) ಪೂರ್ಣ ಗರ್ಭಿಣಿಯಾಗಿರುವ ಬೆಂಗಳೂರಿನ ಮಹಿಳೆಯೊಬ್ಬರು ಅತ್ಯಂತ ಕಠಿಣವಾದ ಯೋಗಾಸನಗಳನ್ನು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಹಿಳೆ ಪ್ರದರ್ಶಿಸಿದ ದೈಹಿಕ ಶಕ್ತಿ ಮತ್ತು ಶಿಸ್ತನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ವೃತ್ತಿಯಲ್ಲಿ ಯೋಗ ಶಿಕ್ಷಕಿಯಾಗಿರುವ ಶಶಿ ಪ್ರಭಾ ದ್ವಿವೇದಿ ಎಂಬುವವರೇ ಈ ವಿಡಿಯೋ ಹಂಚಿಕೊಂಡ ಮಹಿಳೆ. ಅವರು ಸೀರೆ ಉಟ್ಟುಕೊಂಡು ಗರ್ಭಾವಸ್ಥೆಯ ಅಂತಿಮ ಹಂತದಲ್ಲಿ 'ಚಕ್ರಾಸ್ನ' ಸೇರಿದಂತೆ ಹಲವು ಕಠಿಣ ಯೋಗಾಸನಗಳನ್ನು ಸುಲಭವಾಗಿ ಮಾಡುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ಈಗಾಗಲೇ 2.1 ಕೋಟಿಗೂ (21 Million) ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಡಿಯೋದ ಶೀರ್ಷಿಕೆಯಲ್ಲಿ ಶಶಿ ಪ್ರಭಾ ಅವರು, ತಾವು ಮಾಡುತ್ತಿರುವ ಯೋಗಾಸನಗಳು ವರ್ಷಗಳ ತರಬೇತಿಯ ಫಲವೇ ಹೊರತು, ಇದನ್ನು ಇತರರು ಅನುಕರಿಸಲು ನೀಡುತ್ತಿರುವ ಸಲಹೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

39 ವಾರಗಳು, 9 ತಿಂಗಳು. ಇದು ನನ್ನ ವಾಸ್ತವ. ಜನ ಕೇವಲ ಆಸನಗಳನ್ನು ನೋಡುತ್ತಾರೆ. ಆದರೆ ಇದರ ಹಿಂದೆ ನನ್ನ ದೇಹವನ್ನು ನಾನು ಸಜ್ಜುಗೊಳಿಸಲು, ಶಕ್ತಿ ಮತ್ತು ತಾಳ್ಮೆ ಬೆಳೆಸಿಕೊಳ್ಳಲು ವರ್ಷಗಟ್ಟಲೆ ನಡೆಸಿದ ಪರಿಶ್ರಮ ಅವರಿಗೆ ಕಾಣುವುದಿಲ್ಲ," ಎಂದು ಬರೆದುಕೊಂಡಿದ್ದಾರೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ