LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶ್ರೀ ಸಂತ ಸೇವಾಲಾಲ್ ಮಹಾರಾಜರ 287 ನೇ ಜಯಂತಿ ಉತ್ಸವ ಕಾರ್ಯಕ್ರಮ

Advertisement
ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಸಂತ ಸೇವಾಲಾಲ್ ಮಹಾರಾಜರ 287 ನೇ ಜಯಂತಿಯನ್ನು ಚಡಚಣದ ಪ್ರವಾಸಿ ಮಂದಿರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಂಜಾರ ಸಮಾಜದ ಗುರುಗಳು ವಹಿಸಿದ್ದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈ ಭಾಗದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಠ್ಠಲ ದೋ ಕಟಕದೋoಡ ವಹಿಸಿದ್ದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಡಚಣ ತಾಲೂಕಿನ ತಹಶೀಲ್ದಾರ ಸಂಜೆಯಕುಮಾರ ಇಂಗಳೆ ಅವರು, ಪಟ್ಟಣ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಖಡಗೆಕರ, ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಡಿ ಹಕ್ಕೆ, ಕೆಎಂಎಫ್ ನಿರ್ದೇಶಕರಾದ ಸಂತೋಷ ಪಾಟೀಲ ಸಮಾಜದ ಹಿರಿಯರಾದ ಡಿಎಲ್ ಚೌಹಾಣ್ ಎಇಇ ವಿಜಯ ಹವಾಲ್ದಾರ. ಸಿದ್ದಣ್ಣ ಸಕ್ರಿಯವರು. ಮಾದೇವ ಹಿರೆಕುರುಬರ. ಕಾಮೇಶ ಪಾಟೀಲ. ಅಮಶಿದ ಬಿಜ್ಜರಗಿ. ಬಸುಸೌಕಾರ ಬಿರಾದಾರ ಹತ್ತಳ್ಳಿ, ಚಂದು ಪೂಜಾರಿ. ದ್ಯಾವಪ್ಪಗೌಡ ಪಾಟೀಲ. ಧನಸಿಂಗ್ ಪವರ್. ಸಂಜು ರಾತೋಡ. ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಇಲಾಯಿ ನದಾಫ್. ಪಟ್ಟಣ ಪಂಚಾಯತಿಯ ಸದಸ್ಯರಾದ ರಮೇಶ ಶಿಂದೆ. ಮತ್ತು ಸಮಸ್ತ ಚಡಚಣ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಮತ್ತು ಎಲ್ಲ ತಾಂಡಾದ ಯುವಕರು ಹಿರಿಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಜಿಎಸ್ ಪವಾರ್ ವಕೀಲರು 7 ಶ್ರೀ ಸಂತ ಸೇವಾಲಾಲ್ ಮಹಾರಾಜರು ಒಬ್ಬ ಪವಾಡ ಪುರುಷರು ಹಾಗೂ ಯಾವಾಗಲೂ ಸಮಾಜದ ಒಂದು ಒಳ್ಳೆಯ ಚಿಂತಕರು ಆಗಿದ್ದರು. ಅವರು ಕೇವಲ ಸಮಾಜದ ಒಳಿತಿಗಲ್ಲದೆ ಇಡೀ ದೇಶದ ಜನತೆಯ ಒಳಿತಿಗಾಗಿ ಶ್ರಮಿಸಿದ ದೇವರು ಎಂದು ಬಣ್ಣಿಸಿದರು.

ಈಗ ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸುತ್ತಾ ಮುಂದೆ ಸಾಗುಣ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕರಾದ ಸನ್ಮಾನ್ಯ ಶ್ರೀ ವಿಠ್ಠಲ ಕಟಕದೊಂಡ ಮಾತನಾಡಿ ಅವರು ಕೇವಲ ಸಮಾಜದ ಒಳಿತಿಗೆ ಶ್ರಮಿಸದೆ ಮಾನವ ಕುಲಕ್ಕೆ ಶ್ರಮಿಸಿದ ಮಹಾನ ಮೇರು ವ್ಯಕ್ತಿತ್ವ ಮತ್ತು ಧಾರ್ಮಿಕರು ಪವಾಡ ಪುರುಷರು ಆಗಿದ್ದರು ಎಂದು ಬಣ್ಣಿಸಿದರು. ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾಗಿ ವಿಜಯಪುರ ಜಿಲ್ಲಾ ನ್ಯಾಯಾಧೀಶರು ಸಂಘದ ಮಾಜಿ ಉಪಾಧ್ಯಕ್ಷರಾದ ಶ್ರೀ ಜಿ ಎಸ್ ಪವರ್ ವಕೀಲರು ಹಾಗೂ ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಡಾ. ರವಿದಾಸ್ ಜಾಧವ್ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ಶಾಸಕರು ಸಲ್ಲಿಸಿದರು.

ವರದಿ : ಶ್ರೀಕಾಂತ ಬಗಲಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST