LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇಟ್ಟಂಗಿ ಭಟ್ಟಿಯಲ್ಲಿ ಜೀತಕ್ಕಿದ್ದ ಒಡಿಶಾದ 25 ಕಾರ್ಮಿಕರು ಜೀತಮುಕ್ತ 

Advertisement
ಇಳಕಲ್ಲ : ತಾಲ್ಲೂಕಿನ ಸಂಕ್ಲಾಪೂರ ಗ್ರಾಮ ವ್ಯಾಪ್ತಿಯ ಇಟ್ಟಂಗಿ ಭಟ್ಟಿಯಲ್ಲಿ ಜೀತಕ್ಕಿದ್ದ ಒಡಿಶಾ ಮೂಲದ ಐವರು ಬಾಲಕಾರ್ಮಿಕರು ಸೇರಿ 25 ಕಾರ್ಮಿಕರನ್ನು ಜೀತಮುಕ್ತಗೊಳಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಪೋಲಿಸರು ಭಟ್ಟಿ ಮೇಲೆ ದಾಳಿ ಮಾಡಿದರು.25 ಕಾರ್ಮಿಕರು ಹಾಗೂ ಅಲ್ಲಿಯೇ ಇದ್ದ 9 ಮಕ್ಕಳನ್ನು ಬಂಧಮುಕ್ತ ಮಾಡಿ, ರಕ್ಷಿಸಿದ್ದಾರೆ.

ಇಟ್ಟಂಗಿ ಭಟ್ಟಿ ಮಾಲೀಕ ಈರಪ್ಪ ವೀರಭದ್ರಪ್ಪ ಕುಂಬಾರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜೀತಪದ್ದತಿ ನಿಷೇಧ ಕಾಯ್ದೆಯಡಿ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಅಧಿಕಾರಿ ನಾಸಿರ್ ಹುಸೇನ ಬೋರಗಿ ದೂರು ನೀಡಿದ್ದಾರೆ.

'ಒಡಿಶಾದಿಂದ ಕರೆ ತರಲಾಗಿದ್ದ ಕಾರ್ಮಿಕರಿಗೆ 10 ಲಕ್ಷ ಮುಂಗಡ ನೀಡಿ, ವಾರಕ್ಕೆ ಒಬ್ಬರಿಗೆ ₹ 400 ನೀಡಲಾಗುತ್ತಿತ್ತು.ಶೌಚಾಲಯ, ವೈದ್ಯಕೀಯ ಉಪಚಾರ ಹಾಗೂ ಊಟ ನೀಡದೇ, ನಿಗದಿತ ಅವಧಿಗಿಂತ ಹೆಚ್ಚಿಗೆ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು' ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಕಾರ್ಮಿಕರನ್ನು ಬಾಗಲಕೋಟೆಗೆ ಕರೆದೊಯ್ದು, ಅಲ್ಲಿಂದ ಒಡಿಶಾದ ಅವರ ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ' ಎಂದು ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಗಳದ ತಿಳಿಸಿದ್ದಾರೆ.

ಇಳಕಲ್ ತಾಲ್ಲೂಕಿನ ಸಂಕ್ಲಾಪೂರ ಗ್ರಾಮದ ಹತ್ತಿರ ಇಟ್ಟಂಗಿಭಟ್ಟಿಯಲ್ಲಿ ಜೀತಕ್ಕಿದ್ದ 5 ಬಾಲಕಾರ್ಮಿಕರು 20 ಕಾರ್ಮಿಕರು 9 ಮಕ್ಕಳು ಸೇರಿ 34 ಜನರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಹಾಗೂ ಪೊಲೀಸರು ಜೀತಮುಕ್ತ ಮಾಡಿದರು.

ಇಳಕಲ್ ತಾಲ್ಲೂಕಿನ ಸಂಕ್ಲಾಪೂರ ಗ್ರಾಮದ ಹತ್ತಿರ ಇಟ್ಟಂಗಿಭಟ್ಟಿಯಲ್ಲಿ ಜೀತಕ್ಕಿದ್ದ 5 ಬಾಲಕಾರ್ಮಿಕರು 20 ಕಾರ್ಮಿಕರು 9 ಮಕ್ಕಳು ಸೇರಿ 34 ಜನರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಹಾಗೂ ಪೊಲೀಸರು ಜೀತಮುಕ್ತ ಮಾಡಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ