LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

SSLC - ಪಿಯುಸಿ ಮುಗಿಯುತ್ತಿದಂತೆ ನಾಪತ್ತೆಯಾಗುತ್ತಿರುವ ಬಾಲಕಿಯರು : 19 ಕೇಸ್ ಪತ್ತೆ 

Advertisement

ರಾಯಚೂರು: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ (PUC) ಪರೀಕ್ಷೆಗಳು ಮುಕ್ತಾಯಗೊಂಡು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ, ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇಂತಹ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆಯೇ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 19 ಪ್ರಕರಣಗಳು ದಾಖಲಾಗಿವೆ.

 ಅಪ್ರಾಪ್ತ ಬಾಲಕಿಯರು ಪ್ರೇಮದ ಬಲೆಗೆ ಬಿದ್ದು ಯುವಕರೊಂದಿಗೆ ಮನೆ ಬಿಟ್ಟು ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಗ್ಷು ಗಿರಿ ಅವರು, ರಜೆಯ ಅವಧಿಯಲ್ಲಿ ಹೆಣ್ಣುಮಕ್ಕಳ ಮೊಬೈಲ್ ಬಳಕೆ ಹಾಗೂ ನಡವಳಿಕೆಯ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವಂತೆ ಪೋಷಕರಿಗೆ ತುರ್ತು ಎಚ್ಚರಿಕೆ ನೀಡಿದ್ದಾರೆ.

ಪ್ರೇಮದ ಬಲೆಯಲ್ಲಿ ಸಿಲುಕಿ ನಾಪತ್ತೆ : ಪರೀಕ್ಷೆಗಳು ಮುಗಿದ ಬೆನ್ನಲ್ಲೇ 18 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರು ಪ್ರೇಮದ ಬಲೆಯಲ್ಲಿ ಸಿಲುಕಿ, ಯುವಕರೊಂದಿಗೆ ಮನೆ ಬಿಟ್ಟು ಹೋಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.

ಈ ರೀತಿ ಅಪ್ರಾಪ್ತ ಬಾಲಕಿಯರನ್ನು ವಯಸ್ಕ ಯುವಕರು ಕರೆದೊಯ್ದರೆ ಅಥವಾ ಅವರೊಂದಿಗೆ ಬಾಲಕಿಯರು ನಾಪತ್ತೆಯಾದರೆ, ಕಾನೂನುಬದ್ಧವಾಗಿ ಅದನ್ನು ‘ಅಪಹರಣ’ (Kidnapping Case) ಎಂದೇ ಪರಿಗಣಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ