LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಒಳಮೀಸಲಾತಿಗೆ ಸಂಬಂಧಿಸಿದ ಮನೆ-ಮನೆ ಸಮೀಕ್ಷೆ ಬೋಗಸ್ : ಅಂಬೇಡ್ಕರ್ ಮೊಮ್ಮಗ 

Advertisement
ಮುಂಬೈ: ಕರ್ನಾಟಕದಾದ್ಯಂತ ಒಳಮೀಸಲಾತಿಗೆ ಸಂಬಂಧಿಸಿ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಮನೆ-ಮನೆ ಸಮೀಕ್ಷೆಯನ್ನು ಬೋಗಸ್ ಮತ್ತು ನಕಲಿ ಎಂದು ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಬಣ್ಣಿಸಿದ್ದಾರೆ.

'ಪರಿಶಿಷ್ಟ ಜಾತಿಯ ಬೋಗಸ್ ಸರ್ವೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸುತ್ತಿದೆ.ನಿವಾಸಿಗಳೊಂದಿಗೆ ಮಾತನಾಡದೆ ಅಥವಾ ಯಾವುದೇ ನೈಜ ಮಾಹಿತಿಯನ್ನು ಸಂಗ್ರಹಿಸದೆ ಮನೆಗಳಿಗೆ ರಹಸ್ಯವಾಗಿ ನೋಟಿಸ್‌ಗಳನ್ನು ಅಂಟಿಸುವುದು ಯಾವ ರೀತಿಯ ಕಾನೂನುಬದ್ಧ ಸಮೀಕ್ಷೆ? ಮತ್ತು, ಅಂತಹ ನಕಲಿ ಸಮೀಕ್ಷೆಗಳನ್ನು ನಡೆಸುವುದರಿಂದ ಏನು ಪ್ರಯೋಜನ?' ಎಂದು ಅವರು ಕೇಳಿದ್ದಾರೆ.

ಪರಿಶಿಷ್ಟ ಜಾತಿಗಳ ಅನುಚಿತ ಮತ್ತು ಸುಳ್ಳು ಅಂಕಿ-ಅಂಶಗಳನ್ನು ದಾಖಲಿಸಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆಯೇ? ಈ ಮೂಲಕ ಸರ್ಕಾರಿ ವಲಯ ಮತ್ತು ಕಲ್ಯಾಣ ಬಜೆಟ್‌ನಲ್ಲಿ ಅವರ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಉದ್ದೇಶಿಸಿದೆಯೇ? ಪರಿಶಿಷ್ಟ ಜಾತಿಗಳನ್ನು ವಂಚಿಸುವ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿದೆಯೆ' ಎಂದು ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST