LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಇನ್ಮುಂದೆ ಎಲ್ಲಾ ಗ್ರಾಮ ಪಂಚಾಯಿತಿಗಳು ಗಾಂಧಿ ಗ್ರಾಮ : ಸಿದ್ದರಾಮಯ್ಯ ಘೋಷಣೆ

Advertisement

ಬೆಂಗಳೂರು: ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.


ಫ್ರೀಡಂಪಾರ್ಕ್ ನಲ್ಲಿ "ಮನರೇಗಾಬಚಾವೋ ಆಂದೋಲನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಅವರು, ಮಹಾತ್ಮಗಾಂಧಿ ಹೆಸರು ಕೇಳಿದರೆ ಇವರಿಗೆ ಆಗಲ್ಲ.ದುರುದ್ದೇಶದಿಂದ ಮನ್ ರೇಗಾ ಹೆಸರು ಬದಲಾವಣೆ ಮಾಡಿ 'ವಿಬಿ ಜೀ ರಾಮ್ ಜೀ' ಜಾರಿ ಮಾಡಿದ್ದಾರೆ ಎಂದರು.

ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ‌ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು. ಈ ಚಿಂತನೆಯ ಮೇಲೆ ಜೀವ ತಳೆದದ್ದೇ ಮನರೇಗಾ ಯೋಜನೆ. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು ಮನರೇಗಾ ಯೋಜನೆಯ ಮೂಲ‌ ಆಶಯ. ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಕೇವಲ ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆ ರದ್ದು ಮಾಡಿರುವುದಲ್ಲ, ಬದಲಿಗೆ ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದರು.

ಅಂದು ನಾಥೂರಾಮ ಗೋಡ್ಸೆಯ ಗುಂಡೇಟಿಗೆ ಮಹಾತ್ಮ ಗಾಂಧಿ ಬಲಿಯಾದ ಬಳಿಕ ಹೇಗೆ ಮನೆ ಮನೆಗೆ ಗಾಂಧಿ ವಿಚಾರಧಾರೆಗಳು ಹೆಚ್ಚೆಚ್ಚು ತಲುಪಿತೋ, ಇನ್ನು ಮುಂದೆ ಹಾಗೆಯೇ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಗಾಂಧೀಜಿಯವರ ಹೆಸರು ರಾರಾಜಿಸಲಿದೆ. ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು.

ಅಳಿಸಿ ಹಾಕಲು ಗಾಂಧಿ ಎಂಬುದು ಬರಿ ಹೆಸರಲ್ಲ, ಅನ್ಯಾಯ - ಅಸತ್ಯಗಳ ವಿರುದ್ಧದ ಹೋರಾಟಕ್ಕೆ ಕೋಟ್ಯಂತರ ಭಾರತೀಯರಿಗೆ ಇಂದಿಗೂ ಪ್ರೇರಕ ಶಕ್ತಿಯಾಗಿದೆ.. ಮುಂದೆಯೂ ಗಾಂಧಿಯೇ ಈ ದೇಶದ ಆದರ್ಶ ಮತ್ತು ಅಸ್ಮಿತೆ ಎಂದು ತಿಳಿಸಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ