LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಅನುಮತಿ : ನಾಳೆ ಪ್ರಮಾಣ ವಚನ 

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಅನುಮತಿ : ನಾಳೆ ಪ್ರಮಾಣ ವಚನ 

Advertisement

ಚೆನ್ನೈ : ತಮಿಳುನಾಡು ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಮನೆಮಾಡಿದ್ದ ಕುತೂಹಲ ಮತ್ತು ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ. 

ನಟ, ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗೆ ಸರ್ಕಾರ ರಚಿಸಲು ತಮಿಳುನಾಡು ರಾಜ್ಯಪಾಲರು ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದ್ದಾರೆ.ಈ ಮೂಲಕ ದಕ್ಷಿಣದ ಈ ರಾಜ್ಯದಲ್ಲಿ ಹೊಸ ರಾಜಕೀಯ ಪರ್ವ ಆರಂಭವಾಗುವುದು ಈಗ ಖಚಿತವಾಗಿದೆ.

ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್

ಮ್ಯಾಜಿಕ್ ಸಂಖ್ಯೆಯ ಬಲ ಮತ್ತು ಮಿತ್ರಪಕ್ಷಗಳ ಬೆಂಬಲದ ಹಿನ್ನೆಲೆಯಲ್ಲಿ ವಿಜಯ್ ಅವರು ಸಲ್ಲಿಸಿದ್ದ ಹಕ್ಕು ಮಂಡನೆಯನ್ನು ಪರಿಶೀಲಿಸಿದ ರಾಜ್ಯಪಾಲರು, ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಈ ನಿರ್ಧಾರದೊಂದಿಗೆ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ.

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಅವರು ನಾಳೆ (ಶನಿವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಚೆನ್ನೈನ ಐತಿಹಾಸಿಕ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಈ ಭವ್ಯ ಪದಗ್ರಹಣ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳು ಸಾಗಿವೆ. ಲಕ್ಷಾಂತರ ಅಭಿಮಾನಿಗಳು ಮತ್ತು ವಿವಿಧ ರಾಜ್ಯಗಳ ರಾಜಕೀಯ ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್