LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಅತ್ತು ಕರೆದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ : ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Advertisement

ಬೆಂಗಳೂರು : ಅತ್ತು ಕರೆದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಬಂದೇಯ ಗವಾಕ್ಷಿ ಅಂತ ಅಷ್ಟೇ. ಸಿದ್ದರಾಮಯ್ಯ ಹೋಗಿ ಡಿಕೆ ಶಿವಕುಮಾರ್ ಬಂದ್ರು ಅಷ್ಟೇ 2028 ರಲ್ಲಿ ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ ಅದರ ಬಗ್ಗೆ ಆಸಕ್ತಿ ಇಲ್ಲ ಕಾಂಗ್ರೆಸ್ಸಿನ ಕಥೆ ಹೆಂಗಾಗಿದೆ ಎಂದರೆ ಹೋದೆಯಾ ಪಿಶಾಚಿ ಎಂದರೆ ಬಂದೆಯ ಗವಾಕ್ಷಿ ಎಂಬಂತೆ ಆಗಿದೆ.

ಕರ್ನಾಟಕದಲ್ಲಿ ದಲಿತರನ್ನು ವೋಟ್ ಮಾಡಿಕೊಂಡು ಇವತ್ತು ಸಿಎಂ ಮಾಡುತ್ತೇವೆ, ನಾಳೆ ಮಾಡುತ್ತೇವೆ ಇನ್ನೊಂದು ಚುನಾವಣೆ ಬಂದರೆ ಮುಖ್ಯಮಂತ್ರಿ ಅಂತ ಮಾಡುತ್ತೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಇರುವ ದಲಿತ ಲೀಡರ್ ಗಳಿಗೆ ತಾಕತ್ತಿಲ್ಲ. ಎಷ್ಟು ದಿನ ವಂಚನೆ ಮಾಡುತ್ತೀರಾ ನಾವು ಮುಖ್ಯಮಂತ್ರಿ ಆಗುತ್ತೇವೆ ಎಂದು ಕೇಳುವ ತಾಕತ್ತು ಇಲ್ಲ. ದಲಿತರಿಗೆ ಕಾಂಗ್ರೆಸ್ ಭಗಣಿಗೂಟ ಇಟ್ಟಿದೆ.

ನಾಚಿಕೆ ಆಗಲ್ವಾ ನಿಮಗೆ ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರಬೇಕಾ? ದಲಿತರನ್ನು ಈ ಬಾರಿ ಮುಖ್ಯಮಂತ್ರಿ ಮಾಡದೆ ಹೋದರೆ ರಾಜ್ಯದ ಹಿಂದುಳಿದ ದಲಿತ ವರ್ಗಗಳಿಗೆ ಸ್ವಾಭಿಮಾನ ಅನ್ನುವುದು ಕಿಂಚಿತ್ತಾದರು ಇದ್ದರೆ ಯಾರೂ ಕೂಡ ಮುಂದಿನ ಸಚಿವ ಸಂಪುಟದಲ್ಲಿ ಯಾರು ಕೂಡ ಸ್ಥಾನಗಳನ್ನು ಪಡೆಯಬಾರದು. ಎಲ್ಲರೂ ಕೂಡ ದಲಿತ ಸಮುದಾಯಗಳು ಕಾಂಗ್ರೆಸ್ಗೆ ಉತ್ತರ ಕೊಡಿ ಎಲ್ಲರೂ ಕೂಡ ಕಾಂಗ್ರೆಸ್ ಮಾಡುವ ಮೋಸಕ್ಕೆ ಕಾಂಗ್ರೆಸ್ ಅನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST