LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ನಾನು ಕಾಂಗ್ರೆಸ್ ಭವನ ನಿರ್ಮಾಣ ಮಾಡೇ ಮಾಡುತ್ತೇನೆ : ಡಿ.ಕೆ.ಶಿವಕುಮಾರ್

Advertisement
ಬೆಂಗಳೂರು : ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಮೀನು ಬಳಕೆ ಮಾಡಿರುವುದಾಗಿ ಬಿಜೆಪಿ ಆರೋಪ ಮಾಡಿದೆ. ಇದೀಗ ಬಿಜೆಪಿ ನಾಯಕರ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಭವನಗಳಿಗೆ ನಾವು ಸರ್ಕಾರಿ ಜಾಗ ಬಳಸಿಕೊಳ್ಳುತ್ತಿದ್ದೇವೆ. ಬಿಜೆಪಿಯವರು ನೂರಾರು ಎಕರೆ ಕೊಟ್ಟಿಲ್ವೇ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಚಾಣಕ್ಯ ವಿಶ್ವವಿದ್ಯಾಲಯ, ಆರ್ ಎಸ್ ಎಸ್ ಕಚೇರಿಗೆ ಬಿಜೆಪಿ ಅವರು ನೂರಾರು ಎಕರೆ ಭೂಮಿ ಕೊಟ್ಟಿಲ್ಲವೇ? 5 ರಿಂದ 10 ಸಾವಿರ ಅಡಿ ಜಾಗ ಮಂಜೂರು ಮಾಡುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಬೆಂಗಳೂರಲ್ಲಿ ನೂರಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಟ್ರಸ್ಟ್ ಗಳ ಹೆಸರಿನಲ್ಲಿ ಜಾಗವನ್ನು ಪಡೆದಿದ್ದಾರೆ.

ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ ಇದೆ. ಆದರೆ ಬಿಜೆಪಿಗರು ಎಕರೆಗೆ 50 ಲಕ್ಷದ ದರದಲ್ಲಿ ಮಂಜೂರು ಮಾಡಿದೆ 100 ಎಕರೆ ಜಾಗ ಮಂಜೂರು ಮಾಡಿದ್ದಾರೆ.

ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ, ಬಿಜೆಪಿಯವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ಬಿಜೆಪಿಯವರು ಏನಾದರೂ ಆರೋಪಗಳನ್ನು ಮಾಡಿಕೊಳ್ಳಲಿ ನಾವು ನಮ್ಮ ಪಕ್ಷದ ದೇಗುಲ ಕಟ್ಟಲು ತೀರ್ಮಾನಿಸಿದ್ದೇವೆ.

ಇದು ನಮ್ಮ ಕರ್ತವ್ಯ ನಾನು ಇದನ್ನು ಮಾಡಿಯೇ ಮಾಡುತ್ತೇನೆ. ಎಲ್ಲ ಮಾನದಂಡಗಳ ಆಧಾರದ ಮೇಲೆ ಜಾಗ ಮಂಜೂರು ಮಾಡಲಾಗಿದೆ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರುವುದಾದರೆ ಹೋಗಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST