LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News | State News

ನಿದ್ದೆ ಮಂಪರಿನಲ್ಲಿ ಕಾರು ಡಿಕ್ಕಿ : ಇಬ್ಬರು ಪಾದಚಾರಿಗಳು ಸಾವು 

Advertisement

ಗದಗ : ಗದಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಚಾಲಕನೊಬ್ಬ ನಿದ್ದೆ ಮಂಪರಿನಲ್ಲಿ ಪಾದ ಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಪಾದಚಾರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಈ ಒಂದು ಅಪಘಾತ ಸಂಭವಿಸಿದೆ.

ಲಕ್ಷ್ಮೇಶ್ವರ ಪಟ್ಟಣದ ಚನ್ನಮ್ಮ ಕಾಲೇಜ್ ಬಳಿ ಕಾರು ಚಾಲಕನೋರ್ವ ನಿದ್ದೆ ಮಂಪರಿನಲ್ಲಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು 48 ವರ್ಷದ ಶಿವಾನಂದ ಹುಲಕೋಟಿ ಹಾಗೂ 40 ವರ್ಷದ ಅಶೋಕ್ ಸರ್ವಿ ಎಂದು ಗುರುತಿಸಲಾಗಿದೆ. 

ಈ ಕಾರು ಮಹಾರಾಷ್ಟ್ರದಿಂದ ಲಕ್ಷೇಶ್ವರಕ್ಕೆ ಬರುತ್ತಿತ್ತು. ಚನ್ನಮ್ಮ ಸರ್ಕಲ್‌ಗೆ ಬರುತ್ತಿದ್ದಂತೆ ಕಾರು ಚಾಲಕನಿಗೆ ನಿದ್ದೆ ಮಂಪರು ಆಗಿದ್ದು, ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಹತ್ತಿದೆ.

ಅಪಘಾತದಲ್ಲಿ ಮೃತರಾದ ಅಶೋಕ್ ಹಾಗೂ ಶಿವಾನಂದ ಬೆಳಗಿನ ಜಾವ ಅಂಬೇಡ್ಕರ್ ಬಡಾವಣೆಯಿಂದ ವಾಕ್ ಬಂದಿದ್ದರು. 

ಅವರು ನಡೆದು ಬರುತ್ತಿದ್ದಾಗಲೇ ಏಕಾಏಕಿ ಎದುರಿಗೆ ಬಂದ ಹುಂಡೈ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST