LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Entertainment News

ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು

Advertisement
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ರಚಿತಾ ರಾಮ್ ಅವರ ನಟನೆಯ ಸಂಜು ವೆಡ್ಸ್ ಗೀತಾ-2 ಸಿನಿಮಾ ರಿಲೀಸ್ ಆಗಿತ್ತು.

ಆದರೆ ಈ ಒಂದು ಚಿತ್ರದ ಪ್ರಚಾರಕ್ಕೆ ರಚಿತಾ ರಾಮ್ ಅವರು ಪ್ರಚಾರಕ್ಕೆ ಬರಲಿಲ್ಲ ಎಂದು ಚಿತ್ರದ ನಿರ್ದೇಶಕ ಫಿಲಂ ಚೇಂಬರಿಗೆ ದೂರ ನೀಡಿದರು ಇದೀಗ ನಟಿ ರಚಿತಾ ರಾಮ್ ಚಿತ್ರವೊಂದರ ಅಡ್ವಾನ್ಸ್ ಹಣ ಪಡೆದು ವಾಪಸ್ ನೀಡದ ಹಿನ್ನೆಲೆ ಫಿಲಂ ಚೇಂಬರ್ ನಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಫಿಲಂ ಚೇಂಬರ್ ನಲ್ಲಿ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. 'ಉಪ್ಪಿ ರುಪ್ಪಿ' ಸಿನೆಮಾಗಾಗಿ ನಟಿ ಅಡ್ವಾನ್ಸ್ ಪಡೆದಿದ್ದರು. ಹಣ ವಾಪಸ್ ನೀಡದ ಹಿನ್ನೆಲೆ ದೂರು ದಾಖಲಾಗಿದೆ.

ಕಳೆದ 2 ತಿಂಗಳ ಹಿಂದೆಯೇ ದೂರು ದಾಖಲಾಗಿದೆ. 8 ವರ್ಷದ ಹಿಂದೆ ಉಪೇಂದ್ರ ರಚಿತಾ ನಟನೆಯಲ್ಲಿ ಈ ಒಂದು ಚಿತ್ರ ಮೂಡಿ ಬರಬೇಕಿತ್ತು. ಉಪ್ಪಿ ರಪ್ಪಿ ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟಿ ರಚಿತಾ ರಾಮ್ ನಟಿಸಲು ಒಪ್ಪಿಕೊಂಡಿದ್ದರು.

ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಸಿನಿಮಾ ಕೆ ಮಾದೇಶ್ ಅವರು ನಿರ್ದೇಶಿಸಿದ್ದರು. 23 ಲಕ್ಷ ಸಂಭಾವನೆಗೆ ಒಪ್ಪಿಕೊಂಡು 13 ಲಕ್ಷ ಅಡ್ವಾನ್ಸ್ ಪಡೆದಿದ್ದರು. 2017ರಲ್ಲಿ ಬ್ಯಾಂಕ್ ಆಫ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು.

ಫ್ಲೈಟ್ ಟಿಕೆಟ್ ಬುಕಿಂಗ್ ಬಳಿಕ ರಚಿತಾ ರಾಮ್ ಚತ್ರಿಕರಣಕ್ಕೆ ಬರಲಿಲ್ಲ. ಚಿತ್ರೀಕರಣಕ್ಕೆ ಬರುವುದಾಗಿ ಹೇಳಿ 15 ದಿನಗಳ ಕಾಲ ನಟಿ ರಚಿತಾ ರಾಮ್ ಸತಾಯಿಸಿದ್ದರು. ನಿರ್ವಾಪಕಿ ಶೂಟಿಂಗ್ ರೂಮ್ ಬುಕ್ ಮಾಡಿಕೊಂಡು ಕಾದಿದ್ದರು.

ಆದರೆ ನಾಯಕ ನಟನ ಶೂಟಿಂಗ್ ಮಾಡಿಕೊಂಡು ಚಿತ್ರತಂಡ ವಾಪಸ್ ಆಗಿತ್ತು. ನಟಿ ರಚಿತಾ ರಾಮ್ ಅವರಿಂದ ನಿರ್ಮಾಪಕ ಒಂದುವರೆ ಕೋಟಿ ಹಣ ಕಳೆದುಕೊಂಡಿದ್ದಾರೆ.

ಮೈಸೂರಿನಲ್ಲಿ ನಡೆದ ಶೂಟಿನಲ್ಲಿ ಕೇವಲ ಒಂದು ದಿನ ಮಾತ್ರ ರಚಿತಾ ರಾಮ್ ಭಾಗಿಯಾಗಿದ್ದರು ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ. ಅಂದಿನಿಂದ ರಚಿತಾ ರಾಮ್ ಅವರು ಸಂಪರ್ಕಕ್ಕೆ ಸಿಗದೇ ಸತಾಯಿಸಿದ್ದಾರೆ.

ಕೊನೆಯದಾಗಿ ನಿರ್ಮಾಪಕಿ ಫಿಲಂ ಚೇಂಬರಿಗೆ ದೂರು ನೀಡಿದ್ದಾರೆ. ಈ ಕುರಿತು ಎರಡು ತಿಂಗಳ ಹಿಂದೆಯೇ ಫಿಲಂ ಚೇಂಬರ್ ನಲ್ಲಿ ದೂರು ದಾಖಲಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ