LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ತಂದೆ, ತಾಯಿ ಹಾಗೂ ಸಹೋದರಿಯನ್ನ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ

Advertisement
ವಿಜಯನಗರ: ಮಗನೇ ತಂದೆ, ತಾಯಿ ಹಾಗೂ ಸಹೋದರಿ ಮೂವರನ್ನು ಹತ್ಯೆಗೈರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಗನೇ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಲೆಗೈದು ಬಳಿಕ ಬೆಗಳೂರಿಗೆ ಪರಾರಿಯಾಗಿದಾನೆ.

ಕೊಲೆ ಬಳಿಕ ಬೆಂಗಳೂರಿಗೆ ಬಂದ ಆರೋಪಿ, ತಿಲಕನಗರ ಠಾಣೆಯಲ್ಲಿ ತಂದೆ, ತಾಯಿ, ಸಹೋದರಿ ಮೂವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಿಚಾರಿಸಿದ್ದಾಗ ತಾನೇ ಮೂವರನ್ನು ಕೊಲೆಗೈದಿರುವುದಾಗಿ ಅಸ್ಪಷ್ಟವಾಗಿ ಮಾಹಿತಿ ನೀಡಿದ್ದಾನೆ.

ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನೇ ತಂದೆ, ತಾಯಿ, ಸಹೋದರಿ ಮೂವರನ್ನೂ ಕೊಲೆಗೈದು, ಮನೆಯೊಳಗೆ ಹೂತು ಹಾಕಿದ್ದಾಗಿ ಒಮ್ಮೆ ಹೇಳಿಕೆ ನೀಡಿದ್ದಾನೆ.

ಮತ್ತೊಮ್ಮೆ ಸಂಡೂರಿನಲ್ಲಿ ಶವಗಳನ್ನು ಎಸೆದಿದ್ದಾಗಿ ಹೇಳಿದ್ದಾನೆ. ಮಗನೇ ಪೋಷಕರು ಹಾಗೂ ಸಹೋದರಿ ಮೂವರನ್ನು ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆವ್ ತಿಲಕನಗರ ಠಾಣೆ ಪೊಲೀಸರು ಕೊಟ್ಟೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST