LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

1998 ರ ಕೊಯಮತ್ತೂರು ಬಾಂಬ್ ಸ್ಪೋಟ ಕೇಸ್ : ವಿಜಯಪುರದಲ್ಲಿ ಆರೋಪಿ ಅರೆಸ್ಟ್

Advertisement
ವಿಜಯಪುರ : 1998 ರ ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ, ಉಗ್ರ ಸಾದಿಕ್ ಅಲಿಯಾಸ್ ಟೈಲರ್ ರಾಜಾನನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ.

ವಿಜಯಪುರದಲ್ಲಿ ತಮಿಳುನಾಡು ನಿಗ್ರಹ ಪಡೆ ( ಎಟಿಎಸ್ ) ಬಂಧಿಸುವಲ್ಲಿ ಯಶಸ್ವಿಯಾಗಿದೆ.ಈತ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದನು.

ಕೊಯಮತ್ತೂರು ಸ್ಪೋಟಕ್ಕೂ ಮುನ್ನ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದನು. 1998 ಫೆ.14ರಂದು ಅಡ್ವಾಣಿ ಅವರು ಕೊಯಮತ್ತೂರಿಗೆ ಚುನಾವಣಾ ಸಭೆಗೆ ಬಂದಿದ್ದರು.

ಅಡ್ವಾಣಿ ಅವರ ಹತ್ಯೆ ಮಾಡಲು ಕೊಯಮತ್ತೂರಿನ 12 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರಣಿ ಬಾಂಬ್ ಸ್ಪೋಟಿಸಲಾಗಿತ್ತು. ಆದರೆ ಅಡ್ವಾಣಿ ಅವರು ಪಾರಾಗಿದ್ದರು. 58 ಕ್ಕೂ ಹೆಚ್ಚು ಮಂದಿ ಮೃತಪಟ್ಟು. 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಈತ ವಿಜಯಪುರದಲ್ಲಿ ಕಳೆದ 12 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ವಿಜಯಪುರದಲ್ಲಿ ಠಿಕಾಣಿ ಹೂಡಿದ್ದ ಈತ ಹುಬ್ಬಳ್ಳಿ ಮೂಲದ ಯುವತಿಯನ್ನು ಮದುವೆಯಾಗಿದ್ದನು .
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST