LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಮುಗಿತ್ತು 18 ವರ್ಷಗಳ ವನವಾಸ : ಈ ಸಲ ಕಪ್ ನಮ್ದೇ

Advertisement
ಅಹಮದಾಬಾದ್:‌ 18 ವರ್ಷಗಳ ಕಾಯುವಿಕೆ, ಕೋಟ್ಯಾಂತರ ಅಭಿಮಾನಿಗಳ ಹರಕೆ.. ಅದೆಷ್ಟೋ ಕನಸು ಕಣ್ಣುಗಳ ಆಸೆ.. ಕೊನೆಗೂ ನನಸಾಗಿದೆ.
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 18 ವರ್ಷಗಳ ವನವಾಸದ ಬಳಿಕ ಐಪಿಎಲ್‌ ಚಾಂಪಿಯನ್‌ ಆಗಿ ಮೂಡಿ ಬಂದಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ತಂಡವು 9 ವಿಕೆಟ್‌ ಕಳೆದುಕೊಂಡು 190 ರನ್‌ ಮಾಡಿದರೆ, ಪಂಜಾಬ್‌ ತಂಡವು 184 ರನ್‌ ಮಾಡಿತು.

ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿದ ಬೆಂಗಳೂರು ತಂಡದ ಹೆಚ್ಚಿನ ಬ್ಯಾಟರ್‌ ಗಳು ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು.

ಅನುಭವಿ ವಿರಾಟ್‌ ಕೊಹ್ಲಿ ಅವರದ್ದೇ ಗರಿಷ್ಠ ಗಳಿಕೆ. ವಿರಾಟ್‌ 35 ಎಸೆತಗಳಲ್ಲಿ 43 ರನ್‌ ಮಾಡಿದರು. ಉಳಿದಂತೆ ರಜತ್‌ ಪಾಟಿದಾರ್‌ 26 ರನ್‌, ಮಯಾಂಕ್‌ ಅಗರ್ವಾಲ್‌ 24, ಲಿವಿಂಗ್‌ ಸ್ಟೋನ್‌ 25, ಜಿತೇಶ್‌ ಶರ್ಮಾ 24, ಶೆಫರ್ಡ್‌ 17 ರನ್‌ ಮಾಡಿದರು.

ಪಂಜಾಬ್‌ ಪರ ಅರ್ಶದೀಪ್‌ ಮತ್ತು ಜೇಮಿಸನ್‌ ತಲಾ ಮೂರು ವಿಕೆಟ್‌ ಕಿತ್ತರು. ಅದರಲ್ಲೂ ಅರ್ಶದೀಪ್‌ ಅವರ ಮೂರು ವಿಕೆಟ್‌ ಕೊನೆಯ ಓವರ್‌ ನಲ್ಲಿ ಬಂದಿದ್ದು ವಿಶೇಷ. ಉಳಿದಂತೆ ಅಜ್ಮತುಲ್ಲಾ, ವೈಶಾಖ್‌ ಮತ್ತು ಚಾಹಲ್‌ ತಲಾ ಒಂದು ವಿಕೆಟ್‌ ಪಡೆದರು.

191 ರನ್‌ ಗುರಿ ಬೆನ್ನತ್ತಿದ್ದ ಪಂಜಾಬ್‌ ತಂಡಕ್ಕೆ ಪ್ರಿಯಾಂಶ್‌ ಆರ್ಯ ಮತ್ತು ಪ್ರಭ್‌ ಸಿಮ್ರಾನ್‌ ಸಿಂಗ್‌ ಉತ್ತಮ ಆರಂಭ ನೀಡಿದರು. ಆರ್ಯ 24 ರನ್‌ ಮಾಡಿದರೆ, ಪ್ರಭ್‌ ಸಿಮ್ರಾನ್‌ 26 ರನ್‌ ಮಾಡಿದರು. ಕಳೆದ ಪಂದ್ಯದ ಹೀರೋ ಶ್ರೇಯಸ್‌ ಅಯ್ಯರ್‌ ಕೇವಲ ಒಂದು ರನ್‌ ಗೆ ಆಟ ಮುಗಿಸಿದರು.
ಉತ್ತಮ ಬ್ಯಾಟಿಂಗ್‌ ಮಾಡಿದ ಜೋಶ್‌ ಇಂಗ್ಲಿಶ್‌ 39 ರನ್‌ ಮಾಡಿದರು. 23 ಎಸೆತ ಎದುರಿಸಿದ ಅವರು ನಾಲ್ಕು ಸಿಕ್ಸರ್‌ ಬಾರಿಸಿದರು.

ನೆಹಾಲ್‌ ವಧೇರ 18 ಎಸೆತಗಳಲ್ಲಿ 15 ರನ್‌ ಮಾಡಿ ಔಟಾದರು. ಸ್ಪೋಟಕ ಬ್ಯಾಟರ್‌ ಸ್ಟೋಯಿನಸ್‌ ಮೊದಲ ಎಸೆತಕ್ಕೆ ಸಿಕ್ಸರ್‌ ಬಾರಿಸಿದರಾದರೂ ಎರಡನೇ ಎಸೆತಕ್ಕೆ ಔಟಾದರು. ಭುವನೇಶ್ವರ್‌ ಕುಮಾರ್‌ ಒಂದೇ ಓವರ್‌ ನಲ್ಲಿ ಎರಡು ವಿಕೆಟ್‌ ಕಿತ್ತು ಪಂದ್ಯದ ಗತಿ ಬದಲಿಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ