LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

13 ಲಕ್ಷ ಫಾಲವರ್ಸ್‌ಗಳಿದ್ದ ಯೂಟ್ಯೂಬರ್ ಆತ್ಮಹತ್ಯೆ

Advertisement

ಚೆನ್ನೈ: ತಮಿಳುನಾಡು (Tamil Nadu) ಮೂಲದ ಖ್ಯಾತ ಹಣಕಾಸು ಪ್ರಭಾವಿ (Influencer) ವಿ. ಹರೀಶ್ (V Harish) ಅವರು ಮುಟ್ಟುಕಾಡು ನಿವಾಸದಲ್ಲಿ ಆತ್ಮಹತ್ಯೆ (Self Harm) ಮಾಡಿಕೊಂಡಿರುವುದು ತಮಿಳುನಾಡಿನ ಕಂಟೆಂಟ್ ಕ್ರಿಯೇಟರ್ಸ್ ವಲಯದಲ್ಲಿ ತೀವ್ರ ಆಘಾತ (Shocking) ಮೂಡಿಸಿದೆ.

'ಫೈನಾನ್ಸ್ ವಿತ್ ಹರೀಶ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ 13 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದ ಅವರು, ಅಕ್ಟೋಬರ್ 20 ರಂದು ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ.

ಹರೀಶ್ ಅವರ ಸಾವಿಗೆ ಯೂಟ್ಯೂಬರ್ ಜೇಸನ್ ಸ್ಯಾಮ್ಯುಯೆಲ್ ಕಾರಣ ಎಂದು ಹರೀಶ್ ಅವರ ತಂದೆ ಜೆ. ವಿನಾಯಗಮ್ ಗಂಭೀರ ಆರೋಪ ಮಾಡಿದ್ದಾರೆ. ಜೇಸನ್ ಸ್ಯಾಮ್ಯುಯೆಲ್ ಅವರು ಮುಂದುವರಿದು ಸೈಬರ್ ಬೆದರಿಕೆ, ಅಪಪ್ರಚಾರ ಮತ್ತು ಸುಲಿಗೆಗೆ ಯತ್ನಿಸಿದ್ದರಿಂದಲೇ ತನ್ನ ಮಗ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಹರೀಶ್ ಸೆಬಿ (SEBI) ನೋಂದಣಿ ಮಾಡಿಕೊಳ್ಳದೆ ಜನರಿಗೆ ಹಣಕಾಸು ಸಲಹೆ ನೀಡುತ್ತಿದ್ದಾರೆ ಮತ್ತು ವಂಚನೆ ಮಾಡುತ್ತಿದ್ದಾರೆ ಎಂದು ಜೇಸನ್ ಕೆಲವು ದಿನಗಳ ಹಿಂದೆ ವಿಡಿಯೋಗಳನ್ನು ಮಾಡಿ ಬಿಡುಗಡೆ ಮಾಡಿದ್ದರು.

ಆದರೆ, ಆತ್ಮಹತ್ಯೆಗೂ ಮುನ್ನ ಹರೀಶ್ ಅವರು ವಿಡಿಯೋ ಒಂದನ್ನು ಮಾಡಿದ್ದು, ಜೇಸನ್ ಸ್ಯಾಮ್ಯುಯೆಲ್ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟು ಸುಲಿಗೆ ಮಾಡಲು ಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ತಾನು ಯಾವುದೇ ತಪ್ಪು ಮಾಡಿಲ್ಲದಿದ್ದರೂ, ಐದು ವರ್ಷಗಳ ತಮ್ಮ ಕಷ್ಟದ ಶ್ರಮವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ ಬ್ಯಾಲೆಟ್ ಮೂಲಕವೇ ಸ್ಥಳೀಯ ಚುನಾವಣೆ, ಮತಪೆಟ್ಟಿಗೆ ಖರೀದಿಗೆ 128 ಕೋಟಿ : ಸಚಿವ ಖಂಡ್ರೆಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ : ಪತ್ನಿ ಸೇರಿದಂತೆ, ಒಂದೇ ಕುಟುಂಬದ 7 ಜನರ ಬರ್ಬರ ಕೊಲೆವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ