LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ 

Advertisement

ಬೆಳಗಾವಿ: ರೈತರ ಬೇಡಿಕೆಗಳಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸ್ಪಂದಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ, ಗುರುವಾರ ರಾತ್ರಿ ರೈತರು ತಾತ್ಕಾಲಿಕವಾಗಿ ಹೋರಾಟ ಹಿಂಪಡೆದರು. ಇದಕ್ಕೂ ಮುನ್ನ ಜೈಲ್ ಭರೋ ಚಳವಳಿಯ ಭಾಗವಾಗಿ ಜಿಲ್ಲೆಯಾದ್ಯಂತ ದಿನಪೂರ್ತಿ ಪ್ರತಿಭಟನೆ ನಡೆಸಿದರು.

'ಟನ್‌ ಕಬ್ಬಿಗೆ ₹3,600 ದರ ನೀಡಲು ಮತ್ತು ಸಕ್ಕರೆ ಸಗಟು ಮಾರಾಟದ ಹೆಚ್ಚುವರಿ ಲಾಭಾಂಶದಲ್ಲಿ ಶೇ 75ರಷ್ಟು ಪಾಲನ್ನು ರೈತರಿಗೆ ನೀಡಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಪ್ಪಿದ್ದಾರೆ. 

ಇದಕ್ಕೆ ಸಮ್ಮತಿಸಿ ರಾಜ್ಯದಾದ್ಯಂತ ಕಬ್ಬು ಬೆಳೆಗಾರರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ' ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನ‍ಪ್ಪ ಪೂಜೇರಿ ಹೇಳಿದರು.

ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಇಲ್ಲಿನ ವೀರಭದ್ರನಗರದ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸದ್ಯ ಹೋರಾಟ ನಿಲ್ಲಿಸೋಣ. ಕಬ್ಬು ಒಣಗುತ್ತಿದೆ. ಶುಕ್ರವಾರದಿಂದ ಕಾರ್ಖಾನೆಗಳು ಆರಂಭವಾಗಲಿವೆ' ಎಂದರು.

'ಆದರೆ, ಸಕ್ಕರೆಯ ಕನಿಷ್ಠ ಮಾರಾಟ ದರ (ಎಂಎಸ್‌ಪಿ) ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ (ಎಸ್‌ಎಪಿ) ಪಡೆಯುವವರೆಗೆ ಚಳವಳಿ ಅಂತ್ಯ ಆಗುವುದಿಲ್ಲ' ಎಂದೂ ಹೇಳಿದರು.

'ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ದರವನ್ನು (ಎಂಎಸ್‌ಪಿ) ₹31ರಿಂದ ₹60ಕ್ಕೆ ಹೆಚ್ಚಿಸಬೇಕು, ಪೂರ್ಣಪ್ರಮಾಣದ ಎಥೆನಾಲ್ ಖರೀದಿಸಬೇಕು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಚಳಿಗಾಲದ ಅಧಿವೇಶನಕ್ಕೆ ಇಲ್ಲಿಗೆ ಬಂದಾಗ ₹1 ಸಾವಿರ ಪ್ರೋತ್ಸಾಹಧನ ಘೋಷಿಸಲೇಬೇಕು. ಈ ಷರತ್ತುಗಳನ್ನು ಮುಂದಿಟ್ಟಿದ್ದೇವೆ. ನವೆಂಬರ್‌ 20ರವರೆಗೆ ಅದಕ್ಕೆ ಗಡುವು ನೀಡಿದ್ದೇವೆ' ಎಂದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ ಬ್ಯಾಲೆಟ್ ಮೂಲಕವೇ ಸ್ಥಳೀಯ ಚುನಾವಣೆ, ಮತಪೆಟ್ಟಿಗೆ ಖರೀದಿಗೆ 128 ಕೋಟಿ : ಸಚಿವ ಖಂಡ್ರೆಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ : ಪತ್ನಿ ಸೇರಿದಂತೆ, ಒಂದೇ ಕುಟುಂಬದ 7 ಜನರ ಬರ್ಬರ ಕೊಲೆವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ