LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ 

Advertisement

ಬೆಂಗಳೂರು : ಸರ್ಕಾರಿ ನೌಕರಿಯ ಆಸೆಯಿಂದ ಅಡ್ಡದಾರಿ ಹಿಡಿದು ಅಕ್ರಮಗಳ ಮೂಲಕ ಪರೀಕ್ಷೆ ಪಾಸ್ ಮಾಡಲು ಯೋಚಿಸುವವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಠಿಣ ಶಾಕ್ ನೀಡಿದೆ. 

ಇನ್ನುಮುಂದೆ ಕೆಇಎ ನಡೆಸುವ ಯಾವುದೇ ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದರೆ, ಕೇವಲ ಆ ಪರೀಕ್ಷೆಗೆ ಮಾತ್ರವಲ್ಲದೆ, ಇಡೀ ಜೀವನಪೂರ್ತಿ ಯಾವುದೇ ಸರ್ಕಾರಿ ಉದ್ಯೋಗದ ಪರೀಕ್ಷೆ ಬರೆಯದಂತೆ ಶಾಶ್ವತ ನಿರ್ಬಂಧ (ಲೈಫ್ ಟೈಮ್ ಬ್ಯಾನ್) ವಿಧಿಸಲು ತೀರ್ಮಾನಿಸಲಾಗಿದೆ.

ಕೆಇಎ ವ್ಯಾಪ್ತಿಯಷ್ಟೇ ಅಲ್ಲದೆ, ಕೆಪಿಎಸ್‌ಸಿ (KPSC), ಪೊಲೀಸ್ ನೇಮಕಾತಿ ಮಂಡಳಿ ಹಾಗೂ ಶಿಕ್ಷಣ ಇಲಾಖೆ ನಡೆಸುವ ಎಲ್ಲಾ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೂ ಈ ನಿಷೇಧ ಅನ್ವಯವಾಗಲಿದೆ. 

ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದಿದ್ದ ಹಾವೇರಿ ಮೂಲದ ಶಂಕರ್ ಬನ್ನೂರು ಎಂಬಾತ ಜೈಲರ್ ಹುದ್ದೆ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೂ, ಆತನಿಗೆ ಈ ಜೀವಾವಧಿ ನಿಷೇಧದ ಬಿಸಿ ತಟ್ಟಿದೆ. ಇದಲ್ಲದೆ, 2021ರ ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿಗಳಿಗೂ ಇದೇ ರೀತಿಯ ನಿರ್ಬಂಧ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಪರೀಕ್ಷೆಗಳಲ್ಲಿ ಹೊಸ ಮಾದರಿಯ ಅಕ್ರಮಗಳನ್ನು ತಡೆಯಲು ಕೆಇಎ ಒಎಂಆರ್ (OMR) ಶೀಟ್‌ಗಳ ತನಿಖೆಯನ್ನು ತೀವ್ರಗೊಳಿಸಿದೆ.

ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದಿದ್ದರೂ 5ನೇ ಎಂಟ್ರಿ 'E' ಅನ್ನು ಭರ್ತಿ ಮಾಡದೆ ಒಎಂಆರ್ ಶೀಟ್‌ಗಳನ್ನು ಖಾಲಿ ಬಿಟ್ಟ ಸುಮಾರು 180 ಅಭ್ಯರ್ಥಿಗಳ ಮೇಲೆ ಅನುಮಾನ ವ್ಯಕ್ತವಾಗಿದೆ. 

"ನೀವು ಒಎಂಆರ್ ಶೀಟ್ ಬಿಟ್ಟುಬಿಡಿ, ನಾವು ಮ್ಯಾನೇಜ್ ಮಾಡುತ್ತೇವೆ" ಎಂದು ಮಧ್ಯವರ್ತಿಗಳು ಆಮಿಷವೊಡ್ಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯುತ್ತಿದೆ.

ಒಟ್ಟಾರೆಯಾಗಿ, ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಲು ಮತ್ತು ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕೆಇಎ ಅತಿ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಸರ್ಕಾರಿ ಉದ್ಯೋಗ ಪಡೆಯಲು ಶಾರ್ಟ್‌ಕಟ್ ಅಥವಾ ಅಡ್ಡದಾರಿ ತುಳಿಯುವವರ ಕನಸು ಇನ್ನುಮುಂದೆ ನುಚ್ಚುನೂರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ಪರೀಕ್ಷಾ ಅಕ್ರಮ ಎಸಗಿದರೆ ಜೀವನಪೂರ್ತಿ ಸರ್ಕಾರಿ ಉದ್ಯೋಗ ಬ್ಯಾನ್ ಬ್ಯಾಲೆಟ್ ಮೂಲಕವೇ ಸ್ಥಳೀಯ ಚುನಾವಣೆ, ಮತಪೆಟ್ಟಿಗೆ ಖರೀದಿಗೆ 128 ಕೋಟಿ : ಸಚಿವ ಖಂಡ್ರೆಕಬ್ಬು ಬೆಳೆಗಾರರ ಹೋರಾಟ ವಾಪಸ್ : ಇಂದಿನಿಂದ ಫ್ಯಾಕ್ಟರಿಗಳು ಪ್ರಾರಂಭ ಬೆಂಗಳೂರಲ್ಲಿ ಭೀಕರ ಸರಣಿ ಕೊಲೆ : ಪತ್ನಿ ಸೇರಿದಂತೆ, ಒಂದೇ ಕುಟುಂಬದ 7 ಜನರ ಬರ್ಬರ ಕೊಲೆವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ