LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಯತ್ರೀಂದ ಸಿದ್ದರಾಮಯ್ಯ ಅನುಭವ ಇಲ್ಲದ ಮಂಗ : ಎ.ಎಚ್. ವಿಶ್ವನಾಥ್

Advertisement

ಮೈಸೂರು: ಮುಂಬರುವ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲು ರಾಜ್ಯ ಸರ್ಕಾರವು 30 ಜನ ಸಚಿವರಿಗೆ ವಿವಿಧ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. 

ಆದರೆ, ಸಾಂಸ್ಕೃತಿಕ ನಗರಿ ಮೈಸೂರು (Mysuru) ಜಿಲ್ಲೆಯ ಉಸ್ತುವಾರಿಯನ್ನು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ವಹಿಸಿರುವುದು ಈಗ ಹೊಸ ರಾಜಕೀಯ ಚರ್ಚೆಗೆ ಮುನ್ನುಡಿ ಬರೆದಿದೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ಹಿರಿಯ ರಾಜಕಾರಣಿ ಹಾಗೂ ಮಾಜಿ ಎಂಎಲ್‌ಸಿ ಎ.ಎಚ್. ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್. ವಿಶ್ವನಾಥ್, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೂ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ತಲೆಹಾಕುವಿಕೆ ಮುಂದುವರಿದಿದೆ ಎಂದು ನೇರ ಆರೋಪ ಮಾಡಿದರು.

 ಸಿದ್ದರಾಮಯ್ಯ ಅವರು ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಹೊಸದಾಗಿ ಅಧಿಕಾರ ಹಿಡಿದಿರುವ ಮುಖ್ಯಮಂತ್ರಿಗಳಿಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಹಾಗೂ ತಮಗೆ ಬೇಕಾದ ರೀತಿಯಲ್ಲಿ ಸಚಿವ ಸಂಪುಟವನ್ನು ರಚಿಸಿಕೊಳ್ಳಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಭಾನಾಯಕರಾಗಿ ಆಯ್ಕೆಯಾದ ಬಳಿಕ ವಿಧಾನ ಪರಿಷತ್‌ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಮೊದಲ ಬಾರಿಗೆ ಸಚಿವನಾಗಿ ಹಾಗೂ ಸಭಾನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ಹೇಳಿದರು.

ಸಭಾನಾಯಕನಾಗಿ ಅನುಭವ ಕಡಿಮೆ ಇರುವುದರಿಂದ ಕಲಾಪ ನಡೆಸುವ ಸಂದರ್ಭದಲ್ಲಿ ಏನಾದರೂ ತಪ್ಪಾದರೆ ಆಡಳಿತ ಪಕ್ಷದ ಹಾಗೂ ಪ್ರತಿಪಕ್ಷದ ಸದಸ್ಯರು ಅದನ್ನು ಸರಿಪಡಿಸಿ ಮಾರ್ಗದರ್ಶನ ನೀಡಬೇಕು ಎಂದು ಅವರು ಮನವಿ ಮಾಡಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2 ನೇ ದಿನ ಭಾರತಕ್ಕೆ 4 ಪದಕ : ಒಟ್ಟು 6 ಪದಕ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಶ್ರೀಲಂಕಾ ಮಹಿಳಾ ತಂಡಗಳ ಪೈನಲ್ ಇಂಗ್ಲೆಂಡ್- ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಾಳೆ ನಾಳೆ ಭಾರತ- ಜಪಾನ್ ಐತಿಹಾಸಿಕ ಟಿ-20 ಪಂದ್ಯ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ರೈತರ ಸಾವು ಪೊಲೀಸಪ್ಪನ ತೋಟದಲ್ಲೇ ಬೆಳೆದಿತ್ತು ಗಾಂಜಾ : ಹೆಡ್ ಕಾನ್ಸ್​​​​​ಸ್ಟೆಬಲ್​​ ಮಗ ಅಂದರ್ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಸಾವು! ನಾಳೆಯಿಂದ ರಾಜ್ಯಾದ್ಯಂತ '108' ಆಂಬುಲೆನ್ಸ್ ಸೇವೆ ಬಂದ್: ಸಾಮೂಹಿಕ ರಾಜೀನಾಮೆಗೆ ತೀರ್ಮಾನಮೂಲಭೂತ ಸೌಲಭ್ಯಕ್ಕೆ ಒತ್ತಾಯ ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನ ಪಾದಯಾತ್ರೆ ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?: ಏಕವಚನದಲ್ಲಿ ನಿಂದಿಸಿದ ಪ್ರದೀಪ್ ಈಶ್ವರ್