LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹಮಾಲರ ಸಂಘದಿಂದ ವಿಶ್ವ ಕಾರ್ಮಿಕರ ದಿನಾಚರಣೆ!

Advertisement

ಸಿಂಧನೂರು : ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ನೇತೃತ್ವದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು. 
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಎಪಿಎಂಸಿ ಶ್ರಮಿಕ ಭವನದ ಮುಂದೆ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೆಂಪು ದ್ವಜವನ್ನು ಹಾರಿಸುವ ಮೂಲಕ ಹಮಾಲರ ಸಂಘದ ಅಧ್ಯಕ್ಷ ಕಾಮ್ರೆಡ್ ಮಾಬುಸಾಬ್ ಬೆಳ್ಳಟ್ಟಿ ಅವರು ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಹಿರಿಯ ಕಾರ್ಮಿಕ, ರೈತ ಮುಖಂಡರು ಮಾತನಾಡಿ ಆಳುವ ವರ್ಗದ ಬಂಡವಾಳಿಗರು ಮತ್ತು ಭೂ ಮಾಲೀಕರು ಕಾರ್ಮಿಕರ ಮದ್ಯ ಮೌಢ್ಯವನ್ನು ಬಿತ್ತಿ ಮೋಸ ವಂಚನೆಗಳನ್ನು ಮಾಡುತ್ತ ಬಂದಿದ್ದಾರೆ. ಸರಕಾರಗಳು ತಮ್ಮ ನೀತಿ ನಡಾವಳಿಗಳಲ್ಲಿ ಸಹ ಬಂಡವಾಳಿಗರ ಪರವಾಗಿರುವ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ರದ್ದುಗೊಳಿಸುತ್ತಿವೆ. ಇಂತಹ ಸರ್ಕಾರ ಮತ್ತು ವಂಚನೆಯ ಆಳುವ ವರ್ಗವನ್ನು ಸಂಪೂರ್ಣವಾಗಿ ಕಿತ್ತಿ ಒಗೆಯಬೇಕು ಎಂದರು .

ಈ ಸಂದರ್ಭದಲ್ಲಿ:ಎಚ್ ಎನ್. ಬಡಿಗೇರ್. ಬಸವರಾಜ ಬಾದರ್ಲಿ ಉಪನ್ಯಾಸಕ ರಾಮಣ್ಣ ಹಿರೇಬೆರ್ಗಿ.ನಾರಾಯಣ ಬೆಳಗುರ್ಕಿ ಶಂಕರ್ ವಾಲೆಕಾರ್ ಉಪಾಧ್ಯಕ್ಷ ನಾಗಪ್ಪ ಉಮಲೂಟಿ, ಮೇಸ್ತ್ರಿ ರಾಮಣ್ಣ, ನಾಗರಾಜ್ ಅಂಬರೀಶ್ ರಮೇಶ್ ವೇರ್ ಹೌಸ್ ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟೇಶ್ ಮಹಿಳಾ ಅಧ್ಯಕ್ಷರಾದ ಅಂಬಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ವರದಿ : ಬಸವರಾಜ ಬುಕ್ಕನಹಟ್ಟಿ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ